Home » ಸುಳ್ಯ: ನಾಲ್ಕು ವರ್ಷದ ಮಗಳೊಂದಿಗೆ ಬಾವಿಗೆ ಹಾರಿದ ತಾಯಿ !!

ಸುಳ್ಯ: ನಾಲ್ಕು ವರ್ಷದ ಮಗಳೊಂದಿಗೆ ಬಾವಿಗೆ ಹಾರಿದ ತಾಯಿ !!

0 comments

ಸುಳ್ಯ: ನಾಲ್ಕು ವರ್ಷದ ಮಗಳೊಂದಿಗೆ ತಾಯಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ತಾಯಿ ಸಾವನ್ನಪ್ಪಿ ಮಗು ಅದೃಷ್ಟವಶಾತ್ ಬದುಕುಳಿದಿರುವ ಘಟನೆ ದೇವಚಳ್ಳ ಗ್ರಾಮದ ತಳೂರು ಎಂಬಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಡವರನ್ನು ಅಗ್ನಿಶಾಮಕ ದಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ದಯಾನಂದ ಎಂಬವರ ಪತ್ನಿ ಗೀತಾ ಎಂದು ತಿಳಿದು ಬಂದಿದ್ದು, ಇವರು ತನ್ನ 4 ವರ್ಷದ ಮಗಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಮುಂಜಾನೆ ಎದ್ದಾಗ ಗೀತಾ ಮನೆಯಲ್ಲಿ ಇಲ್ಲದಿರುವುದನ್ನು
ಕಂಡು ಹುಡುಕಾಡಿದಾಗ ಬಾವಿಯಲ್ಲಿ ಮಗಳು ಮತ್ತು ಪತ್ನಿ
ಬಿದ್ದಿರುವುದು ಕಂಡುಬಂದಿದ್ದು, ಮಗಳು ಬಾವಿಯೊಳಗೆ ಕಲ್ಲಿನ ಸಹಾಯದಿಂದ ಬದುಕುಳಿದಿದ್ದಳು. ತಕ್ಷಣ ಸುಳ್ಯ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಗೀತಾ ಎನ್ಎಎಂಸಿಯಲ್ಲಿ ಕ್ಲರ್ಕ್ ಆಗಿ ಕೆಲಸಮಾಡುತ್ತಿದ್ದರು. ಇವರ ಆತ್ಮಹತ್ಯೆಯ ಹಿಂದಿರುವ ಕಾರಣ ತನಿಖೆಯ ಮೇಲಷ್ಟೇ ತಿಳಿದು ಬರಬೇಕಿದೆ.

You may also like

Leave a Comment