2
ಸುಳ್ಯ : ಸುಳ್ಯ ತಾಲೂಕಿನ ದುಗ್ಗಲಡ್ಕ ಕುಂಬೆತ್ತಿಬನ ನಿವಾಸಿ ಸುಳ್ಯ ಠಾಣೆಯ ಪೊಲಿಸ್ ಹೆಡ್‌ಕಾನ್‌ಸ್ಟೇಬಲ್ ಬಾಲಕೃಷ್ಣ ಗೌಡ ಕೊಯಿಕುಳಿ ಹೃದಯಾಘಾತದಿಂದ ಸೆ.9ರಂದು ನಿಧನರಾದರು.
ಸುಳ್ಯ ಠಾಣೆಯಲ್ಲಿ ನಿನ್ನೆ ಕರ್ತವ್ಯ ನಿರ್ವಹಿಸಿ ಮನೆಗೆ ತೆರಳಿದ್ದ ಬಾಲಕೃಷ್ಣ ಗೌಡ ಕೊಯಿಕುಳಿ ಸೆ.9ರಂದು ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.
ಮುಂಜಾನೆ ಸುಮಾರು 5 ಗಂಟೆಯ ವೇಳೆಗೆ ಅಸ್ವಸ್ಥರಾದ ಅವರನ್ನು ಮನೆಯವರು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದರಾದರೂ, ಅಲ್ಲಿ ಅವರು ಕೊನೆಯುಸಿರೆಳೆದರು.
ಮೃತರು ಪತ್ನಿ ಮೀನಾಕ್ಷಿ, ಪುತ್ರರಾದ ಹೇಮಂತ್, ಜಯಂತ್, ಸಹೋದರ ಬಾಲಚಂದ್ರ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
