Sullia: ಸುಳ್ಯ ಚೆನ್ನಕೇಶವ ಕಲಾ ಮತ್ತು ಸಾಂಸ್ಕೃತಿಕ ಸಂಘದ ಆಯೋಜನೆಯಲ್ಲಿ ಚೆನ್ನಕೇಶವ ದೇವರ ಜಾತ್ರೋತ್ಸವದ ಅಂಗವಾಗಿವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಜ. 5 ರಂದು ಸಂಜೆ ಭಜನಾ ಸಂಕೀರ್ತನೆ ಹಾಗೂ ಕುಣಿತ ಭಜನೆಯು ನಡೆಯಿತು.ದೇವಸ್ಥಾನದ ಪ್ರಧಾನ ಅರ್ಚಕರಾದ ಹರಿಕೃಷ್ಣ ರವರು ದೀಪ ಪ್ರಜ್ವಲಿಸಿದರು.
ಈ ಸಂದರ್ಭದಲ್ಲಿ ಬೂಡು ರಾಧಾಕೃಷ್ಣ ರೈ, ಸುಭಾಷ್ ಕುಕ್ಕಂದೂರು, ಮೋಹನ ಗೌಡ ಕೆರೆಮೂಲೆ, ಸಂಘದ ಸಂಚಾಲಕ ಲೋಕೇಶ್ ಎಸ್, ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು. ಬಳಿಕ ಸ್ಥಳೀಯ ಭಜನಾ ತಂಡದವರಿಂದ ಭಜನಾ ಸಂಕೀರ್ತನೆ ನಡೆಯಿತು.ಸಃಘದ ಸಂಚಾಲಕ ಲೋಕೇಶ್ ಎಸ್ ರವರ ಅಧ್ಯಕ್ಷತೆಯಲ್ಲಿಧಾರ್ಮಿಕ ಸಭೆಯು ನಡೆಯಿತು. ಅತಿಥಿಗಳಾಗಿ ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಮೊತ್ತೇಸರರ ಪೈಕಿ ಕೃಪಾಶಂಕರ ತುದಿಯಡ್ಕ, ಎಂ. ಬಿ. ಪೌಂಡೇಶನ್ ನ ಅಧ್ಯಕ್ಷ ಎಂ. ಬಿ. ಸದಾಶಿವ, ಕಾಯರ್ತೋಡಿ ಮಹಾವಿಷ್ಣು ದೇವಸ್ಥಾನದ ಅಧ್ಯಕ್ಷ ಎಂ. ವೆಂಕಪ್ಪ ಗೌಡ, ಸುಳ್ಯ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಶ್ರೀಕಾಂತ್ ಗೋಳ್ವಾಲ್ಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕೆ. ವಿ. ಜಿ. ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಡಾ. ರವಿಕಾಂತ್ ಮತ್ತು ಡಾ. ಗೀತಾ ದೊಪ್ಪ ದಂಪತಿಯವರನ್ನು ಹಾಗೂ ಸಮಾಜ ಸೇವಕ ಅಟೋ ಚಾಲಕ ಸುಧಾಕರ ಕೇರ್ಪಳ ರವರನ್ನು ಸನ್ಮಾನಿಸಲಾಯಿತು.ಬಳಿಕ ಝೇಂಕಾರ ಕಲಾ ಪ್ರತಿಷ್ಠಾನ ಸುಳ್ಯ, ಡಿ ಯುನೈಟೆಡ್ ಡಾನ್ಸ್ ಸ್ಟುಡಿಯೋ, ಸುಳ್ಯ ಸ್ನೇಹ ಶಾಲೆ, ಪ್ಯೂಶನ್ ಇನ್ಸಿಟ್ಯೂಟ್ ಆಫ್ ಡ್ಯಾನ್ಸ್, ಶ್ರೀ ಗುರು ರಾಘವೇಂದ್ರ ಮಕ್ಕಳ ಕಲಾ ತಂಡ ಸುಳ್ಯ, ಎಕ್ಸೆಸಿ ಡ್ಯಾನ್ಸ್ ಕ್ರೀವ್ ಸುಳ್ಯ, ಎಂ. ಬಿ. ಪೌಂಡೇಶನ್ ಸುಳ್ಯ ಇವರಿಂದ ವಿವಿಧ ವೈವಿಧ್ಯ ಮಯ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನ ವಾಯಿತು.
