

ಜೆಸಿಐ ಸುಳ್ಯ ಪಯಸ್ವಿನಿ ಇದರ 2026 ನೇ ಸಾಲಿನ ಅಧ್ಯಕ್ಷೆ ಶ್ರೀಮತಿ ಲತಾಶ್ರೀ ಸುಪ್ರೀತ್ ಮೋಂಟಡ್ಕ ತಂಡದ ಪದಪ್ರದಾನ ಸಮಾರಂಭ ಜ.20ರಂದು ಸುಳ್ಯ ಅರಂಬೂರು ಗ್ರ್ಯಾಂಡ್ ರಸಪಾಕ ಹೋಟೆಲ್ ಸಭಾಂಗಣದಲ್ಲಿ ನಡೆಯಿತು.
ಸಭೆಯ ಪೂರ್ವಾರ್ದ ಭಾಗದ ಅಧ್ಯಕ್ಷತೆಯನ್ನು ಜೆಸಿಐ ಸುಳ್ಯ ಪಯಸ್ವಿನಿ ಅಧ್ಯಕ್ಷ ಸುರೇಶ್ ಕಾಮತ್ ರ ವಹಿಸಿ 2025ರ ವಾರ್ಷಿಕ ಕಾರ್ಯ ಚಟುವಟಿಕೆಗಳನ್ನು ವಿವರಿಸಿದರು. ಜೇಸಿಐ ಭಾರತದ ವಲಯ 15ರ ನಿಕಟಪೂರ್ವ ವಲಯಾಧ್ಯಕ್ಷರಾದ ಜೇಸಿ ಸನೇಟರ್ ಅಭಿಲಾಸ್ ಬಿ. ಎ. ಇವರ ಉಪಸ್ಥಿತಿಯಲ್ಲಿ ಪದಪ್ರಧಾನ ಕಾರ್ಯ ನಡೆಯಿತು.
ಪದಪ್ರಧಾನದ ಬಳಿಕ ಸಭೆಯ ಉತ್ತಾರಾರ್ಧ ಭಾಗದ ಸಭೆಯ ಅಧ್ಯಕ್ಷತೆಯನ್ನು ಜೇಸಿ ಲತಾಶ್ರೀ ಸುಪ್ರೀತ್ ಮೋಂಟಡ್ಕರವರು ವಹಿಸಿ ಮುಂಬರುವ ದಿನಗಳಲ್ಲಿ ಯುವಜನರಿಗೆ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚು ಹೆಚ್ಚು ತರಬೇತಿ ಕಾರ್ಯಕ್ರಮಗಳೊಂದಿಗೆ ಸಮಾಜ ಮುಖಿ ಕಾರ್ಯಗಳತ್ತ ಗಮನ ಹರಿಸುವುದಾಗಿ ಹೇಳಿದರು.
ನಿವೃತ್ತ ಇಂಡಿಯನ್ ಆರ್ಮಿ ಕ್ಯಾಪ್ಟನ್ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ರು ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿದರು
ಮುಖ್ಯ ಅತಿಥಿಗಳಾಗಿ ಜೇಸಿಐ ಭಾರತ ವಲಯ 15ರ ನಿಕಟಪೂರ್ವ ವಲಯಾಧ್ಯಕ್ಷರಾದ ಜೇಸಿಐ ಸೆನೆಟರ್ ಅಭಿಲಾಸ್ ಬಿ. ಎ., ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಸುಳ್ಯ ಇದರ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ. ಅಕ್ಷಯ್ ಕೆ.ಸಿ., ಜೇಸಿಐ ಭಾರತ ವಲಯ 15ರ ವಲಯ ಉಪಾಧ್ಯಕ್ಷರಾದ ಜೇಸಿಐ ಸೆನೆಟರ್ ಜಿತೇಶ್ ಪೆರೆರಾ, ಜೇಸಿಐ ಪಯಸ್ವಿನಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಜೇಸಿ.ಶಹೆಚ್.ಜಿ.ಎಫ್ ಜಯಪ್ರಕಾಶ್ ಕಾನತ್ತಿಲ,
ಆಗಮಿಸಿ ಶುಭಹಾರೈಸಿದರು.
ಕಾರ್ಯಕ್ರಮ ಸಂಯೋಜಕ ರವಿಕುಮಾರ್ ಅಕ್ಕೋಜಿಪಾಲ್ ವೇದಿಕೆಯಲ್ಲಿ ಇದ್ದರು.
ಜತೆ ಕಾರ್ಯದರ್ಶಿ ವಿನೋದ್ ಮೂಡಗದ್ದೆ ಜೇಸಿ ವಾಣಿ ವಾಚಿಸಿದರು. ಪೂರ್ವಾಧ್ಯಕ್ಷ ಅಶೋಕ್ ಚೂಂತಾರು ನಿಕಟಪೂರ್ವಾಧ್ಯಕ್ಷರಾದ ಜೇಸಿ ಹೆಚ್.ಜಿ.ಎಫ್ ಗುರುಪ್ರಸಾದ್ ನಾಯಕ್ ರನ್ನು ಪೂರ್ವಾಧ್ಯಕ್ಷರ ಸಾಲಿಗೆ ಸೇರಿಸಿದರು. ಕೋಶಾಧಿಕಾರಿ ಜೇಸಿ. ಪ್ರಸನ್ನ ಎಂ.ಆರ್. ನೂತನ ಕಾರ್ಯದರ್ಶಿಯವರನ್ನು, ಐಪಿಪಿ ಗುರುಪ್ರಸಾದ್ ನಾಯಕ್ ನೂತನ ಅಧ್ಯಕ್ಷರನ್ನು, ಜೇಸಿ ಹೆಚ್.ಜಿ.ಎಪ್. ನವೀನ್ ಕುಮಾರ್ ಅಜ್ಜಾವರ ನೂತನ ಸದಸ್ಯರನ್ನು, ಜೇಸಿ. ಉಮೇಶ್ ಬೊಳುಗಲ್ಲು, ಜೇಸಿ. ರಮ್ಯಾ ರಂಜಿತ್, ಜೇಸಿ. ಶೋಭಾ ಚೂಂತಾರು, ಜೇಸಿ.ಸುನಿತಾ ರವಿಕುಮಾರ್ ಅತಿಥಿಗಳನ್ನು ಪರಿಚಯಿಸಿದರು.
ಪೂರ್ವಾಧ್ಯಕ್ಷರಾದ ಜೇಸಿ ಹೆಚ್. ಜಿ.ಎಫ್. ಎ. ಕೆ ಮೋಹನ್ ರವರು ಅತಿಥಿ ಅಭ್ಯಾಗತರನ್ನು ವೇದಿಕೆಗೆ ಆಹ್ವಾನಿಸಿ, ಕಾರ್ಯದರ್ಶಿ ಜೇಸಿ ತಾರ ಮಾದವ ಚೂಂತಾರು ವಂದಿಸಿದರು.













