Supreme Court : ಬೇರೆಯವರ ಮನೆಯಲ್ಲಿ ದೀರ್ಘಾವಧಿ ಕಾಲ ಬಾಡಿಗೆ ಇದ್ದರೆ, ಬಾಡಿಗೆದಾರನು ಮನೆ ಮಾಲೀಕನಾಗಲು ಸಾಧ್ಯವಿಲ್ಲ ಎಂದು ಭಾರತದ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ.
ಹೌದು, ಭಾರತದ ಸುಪ್ರೀಂ ಕೋರ್ಟ್ 2025ರಲ್ಲಿ ಆಸ್ತಿ ಮಾಲೀಕತ್ವದ ಕುರಿತು ಒಂದು ಐತಿಹಾಸಿಕ ಮತ್ತು ಮಹತ್ವದ ತೀರ್ಪನ್ನು ನೀಡಿದೆ. ಯಾವುದೇ ಬಾಡಿಗೆದಾರ – ಅವರು 5 ವರ್ಷಗಳಿಂದಲೂ ಇಲ್ಲವೇ 50 ವರ್ಷಗಳಿಂದಲೂ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರೂ – ಪ್ರತಿಕೂಲ ಸ್ವಾಧೀನ ಮೂಲಕ ಆ ಆಸ್ತಿಯ ಮಾಲೀಕತ್ವವನ್ನು ಎಂದಿಗೂ ಪಡೆಯಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಘೋಷಿಸಿದೆ.
ದೆಹಲಿಯಲ್ಲಿ ಇಂಥದ್ದೇ ಒಂದು ಪ್ರಕರಣದ ಕುರಿತಾಗಿ ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸುವ ವೇಳೆ ಸುಪ್ರೀಂ ಕೋರ್ಟ್ ಇಂತಹ ಮಹತ್ವದ ತೀರ್ಪನ್ನು ನೀಡಿದೆ. ಈ ತೀರ್ಪು ಭೂಮಾಲೀಕರ ಹಕ್ಕುಗಳನ್ನು ಬಲಪಡಿಸುವ ಜೊತೆಗೆ, ದಶಕಗಳಿಂದ ನಡೆದುಕೊಂಡು ಬಂದ ಬಾಡಿಗೆದಾರ-ಮಾಲೀಕ ವಿವಾದಗಳಿಗೆ ದೃಢವಾದ ತಡೆಯೊಡ್ಡಿದೆ.
