Home » Supreme Court : ಅಶ್ಲೀಲ ಚಿತ್ರಗಳ ನಿಷೇಧಕ್ಕಾಗಿ ಅರ್ಜಿ- ತನ್ನ ಒಪ್ಪಿಗೆ ಇಲ್ಲ ಎಂದ ಸುಪ್ರೀಂ ಕೋರ್ಟ್

Supreme Court : ಅಶ್ಲೀಲ ಚಿತ್ರಗಳ ನಿಷೇಧಕ್ಕಾಗಿ ಅರ್ಜಿ- ತನ್ನ ಒಪ್ಪಿಗೆ ಇಲ್ಲ ಎಂದ ಸುಪ್ರೀಂ ಕೋರ್ಟ್

0 comments

Supreme Court : ಅಶ್ಲೀಲ ಚಿತ್ರಗಳನ್ನು ನಿಷೇಧಿಸಬೇಕೆಂದು ವ್ಯಕ್ತಿ ಒಬ್ಬರ ಸುಪ್ರೀಂಕೋರ್ಟಿಗೆ ಅರ್ಜಿಯನ್ನು ಸಲ್ಲಿಸಿದ್ದು ಈ ಅರ್ಜಿ ವಿಚಾರಣೆಗೆ ತನ್ನ ಒಲವಿಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಅಷ್ಟೇ ಅಲ್ಲದೆ ನೇಪಾಳದಲ್ಲಿ ಏನಾಯಿತು ಎಂಬುದು ಗೊತ್ತಿದೆಯೇ? ಎಂದು ಪ್ರಶ್ನೆಯನ್ನು ಕೂಡ ಮಾಡಿದೆ.

ಯಸ್, ಅಶ್ಲೀಲ ಚಿತ್ರಗಳನ್ನು ನೋಡುವುದನ್ನು ತಡೆಯಲು, ವಿಶೇಷವಾಗಿ ಇನ್ನೂ ವಯಸ್ಸನ್ನು ತಲುಪದವರಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಅಂತಹ ಯಾವುದೇ ವಿಷಯವನ್ನು ನೋಡುವುದನ್ನು ನಿಷೇಧಿಸಲು ರಾಷ್ಟ್ರೀಯ ನೀತಿಯನ್ನು ರೂಪಿಸಲು ಮತ್ತು ಕ್ರಿಯಾ ಯೋಜನೆಯನ್ನು ರೂಪಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಲು ಅರ್ಜಿದಾರರು ಮನವಿ ಮಾಡಿದ್ದರು.

ಇದೀಗ ಅರ್ಜಿಯನ್ನು ಪರಿಗಣಿಸಲು ತಾನು ಒಲವು ಹೊಂದಿಲ್ಲ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ. ಅಲ್ಲದೆ ಸೆಪ್ಟೆಂಬರ್‌ನಲ್ಲಿ ನೇಪಾಳದಲ್ಲಿ ನಡೆದ ಜೆನ್ ಝೀ ಪ್ರತಿಭಟನೆಗಳನ್ನು ಉಲ್ಲೇಖಿಸಿರುವ ಸುಪ್ರೀಂ ಕೋರ್ಟ್, “ಸಾಮಾಜಿಕ ಜಾಲತಾಣಗಳ ನಿಷೇಧದದ ಬಳಿಕ ಯುವಕರು ಭ್ರಷ್ಟ ಆಡಳಿತವನ್ನು ಉರುಳಿಸಲು ಹಿಂಸಾತ್ಮಕ ಆಂದೋಲನಗಳನ್ನು ನಡೆಸಿದಾಗ “ನೇಪಾಳದಲ್ಲಿ ನಿಷೇಧದ ವಿರುದ್ಧ ಏನಾಯಿತು ನೋಡಿ” ಎಂದು ಹೇಳಿದೆ. ಅಲ್ಲದೆ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇತೃತ್ವದ ವಿಭಾಗೀಯ ಪೀಠ ನಾಲ್ಕು ವಾರಗಳ ನಂತರ ಅರ್ಜಿಯನ್ನು ವಿಚಾರಣೆಗೆ ಒಳಪಡಿಸುವುದಾಗಿ ಹೇಳಿದೆ.

You may also like