Home » Dharmasthala Case: ಮಾಧ್ಯಮ ನಿರ್ಬಂಧಕ್ಕೆ ಸುಪ್ರೀಂ ನಕಾರ: ಹರ್ಷೇಂದ್ರ ಕುಮಾರ್‌ಗೆ ಹಿನ್ನಡೆ

Dharmasthala Case: ಮಾಧ್ಯಮ ನಿರ್ಬಂಧಕ್ಕೆ ಸುಪ್ರೀಂ ನಕಾರ: ಹರ್ಷೇಂದ್ರ ಕುಮಾರ್‌ಗೆ ಹಿನ್ನಡೆ

0 comments

Dharmasthala Case: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂಳಲಾಗಿದೆ ಎನ್ನುವ ಆರೋಪಕ್ಕೆ ಕುರಿತಂತೆ ಮಾನಹಾನಿಕರ ವರದಿ ಪ್ರಸಾರ ಮಾಡುವ ಮಾಧ್ಯಮಗಳಿಗೆ ನಿರ್ಬಂಧ ಹೇರಬೇಕೆಂದು ಕೋರಿದ್ದ ಧರ್ಮಸ್ಥಳ ದೇವಸ್ಥಾನದ ಕಾರ್ಯದರ್ಶಿ ಡಿ.ಹರ್ಷೇಂದ್ರ ಕುಮಾರ್‌ ಸಲ್ಲಿಸಿದ್ದ ಮೇಲ್ಮನವಿಗೆ ಸುಪ್ರೀಂಕೋರ್ಟ್‌ನಲ್ಲಿ ಹಿನ್ನಡೆಯಾಗಿರುವ ಕುರಿತು ವರದಿಯಾಗಿದೆ. ಈ ಕುರಿತು ನ್ಯಾಯಮೂರ್ತಿಗಳಾದ ರಾಜೇಶ್‌ ಬಿಂದಾಲ್‌ ಮತ್ತು ಮನಮಹೋನ್‌ ಅವರಿದ್ದ ನ್ಯಾಯಪೀಠ ಇಂದು (ಶುಕ್ರವಾರ) ವಿಚಾರಣೆ ನಡೆಸಿದೆ.

ಮಾಧ್ಯಮಗಳ ಮೇಲೆ ಯಾವುದೇ ರೀತಿಯ ನಿರ್ಬಂಧ (ಗ್ಯಾಗ್‌ ಆರ್ಡರ್‌) ಹೇರಲು ನಿರಾಕರಿಸಿರುವ ನ್ಯಾಯಪೀಠ, ವಾಕ್‌ ಸ್ವಾತಂತ್ರ್ಯದ ಮಹತ್ವವನ್ನು ಒತ್ತಿ ಹೇಳಿದೆ.

ಹರ್ಷೇಂದ್ರ ಕುಮಾರ್‌ ಡಿ.ವರ್ಸಸ್‌ ಕುಡ್ಲ ರಾಂಪೇಜ್‌ ಮತ್ತು ಇತರರು ಪ್ರಕರಣದಲ್ಲಿ ಮಧ್ಯಂತರ ತಡೆಯಾಜ್ಞೆ ನೀಡಲು ನಿರಾಕರಿಸಿದ ನ್ಯಾಯಲಯ, ಈ ಕುರಿತು ಎರಡು ವಾರಗಳಲ್ಲಿ ಸೂಕ್ತ ತೀರ್ಮಾನ ಮಾಡಲು ಬೆಂಗಳೂರು ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ.

ಇದನ್ನು ಓದಿ: Belthangady: ಬೆಳ್ತಂಗಡಿ: ಮಹೇಶ್‌ ಶೆಟ್ಟಿ ತಿಮರೋಡಿ ನೇತೃತ್ವದಲ್ಲಿ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯಿಂದ ಆ.9 ರಂದು ರಕ್ಷಾಬಂಧನ

You may also like