Home » Supreme Court: ‘ಸ್ತನ ಹಿಡಿಯುವುದು ಅತ್ಯಾಚಾರ ಯತ್ನವಲ್ಲ’ ಎಂಬ ಅಲಹಾಬಾದ್ ಹೈಕೋರ್ಟ್ ತೀರ್ಪಿಗೆ ಸುಪ್ರೀಂ ಕೋರ್ಟ್ ತಡೆ

Supreme Court: ‘ಸ್ತನ ಹಿಡಿಯುವುದು ಅತ್ಯಾಚಾರ ಯತ್ನವಲ್ಲ’ ಎಂಬ ಅಲಹಾಬಾದ್ ಹೈಕೋರ್ಟ್ ತೀರ್ಪಿಗೆ ಸುಪ್ರೀಂ ಕೋರ್ಟ್ ತಡೆ

0 comments

Supreme Court: ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಅಲಹಾಬಾದ್ ಹೈಕೋರ್ಟ್(Allahabad high court) ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ಬುಧವಾರ ತಡೆ ನೀಡಿದೆ. ಸ್ತನಗಳನ್ನು ಹಿಡಿಯುವುದು ಅಥವಾ ಪೈಜಾಮದ ದಾರ ಎಳೆಯುವ ಕೃತ್ಯಗಳು ಅತ್ಯಾಚಾರದ ಯತ್ನವಲ್ಲ ಎಂದು ಹೈಕೋರ್ಟ್ ಹೇಳಿತ್ತು. “ಈ ತೀರ್ಪು ಸೂಕ್ಷ್ಮತೆಯ ಕೊರತೆಯನ್ನು ತೋರಿಸುತ್ತದೆ ಎಂದು ಹೇಳಲು ನಮಗೆ ನೋವಾಗುತ್ತದೆ” ಎಂದು ಸುಪ್ರೀಂ ಕೋರ್ಟ್‌ ಪೀಠ ಹೇಳಿದೆ. ಅಂತಹ ಕೃತ್ಯಗಳು ಪ್ರಾಥಮಿಕವಾಗಿ ‘ತೀವ್ರತರದ ಲೈಂಗಿಕ ದೌರ್ಜನ್ಯ’ದ ಅಪರಾಧ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು.

ಅಲಹಾಬಾದ್ ಹೈಕೋರ್ಟ್ ಏನು ಹೇಳಿದೆ?
ನ್ಯಾಯಮೂರ್ತಿ ರಾಮ್ ಮನೋಹರ್ ನಾರಾಯಣ್ ಮಿಶ್ರಾ ಅವರ ಪೀಠವು ಆರೋಪಿಯ ಕ್ರಿಮಿನಲ್ ಪರಿಷ್ಕರಣಾ ಅರ್ಜಿಯನ್ನು ಮಾನ್ಯ ಮಾಡಿ ವಿವಾದಾತ್ಮಕ ಆದೇಶವನ್ನು ಹೊರಡಿಸಿತು. ಹೈಕೋರ್ಟ್ ಆರೋಪಿಯನ್ನು ಐಪಿಸಿ ಸೆಕ್ಷನ್ 354-ಬಿ (ವಿವಸ್ತ್ರಗೊಳಿಸುವ ಉದ್ದೇಶದಿಂದ ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗ) ಮತ್ತು ಪೋಕ್ಸೊ ಕಾಯ್ದೆಯ ಸೆಕ್ಷನ್ 9/10 (ತೀವ್ರ ಲೈಂಗಿಕ ದೌರ್ಜನ್ಯ) ಅಡಿಯಲ್ಲಿ ವಿಚಾರಣೆಗೆ ಒಳಪಡಿಸಬೇಕೆಂದು ನಿರ್ದೇಶಿಸಿತ್ತು.

ನವೆಂಬರ್ 10, 2021 ರಂದು ಆರೋಪಿಗಳು ಸಂತ್ರಸ್ತೆಯನ್ನು ತಮ್ಮ ಮೋಟಾರ್ ಸೈಕಲ್‌ನಲ್ಲಿ ಕರೆದುಕೊಂಡು ಹೋಗಿ ಆಕೆಯ ಮನೆಗೆ ಬಿಡಲು ಮುಂದಾದಾಗ ಹಲ್ಲೆ ನಡೆದಿತ್ತು. ಆಕೆಯ ತಂದೆ ಅವರ ಭರವಸೆಯನ್ನು ನಂಬಿ ಸಂತ್ರಸ್ತೆಯನ್ನು ತಮ್ಮೊಂದಿಗೆ ಹೋಗಲು ಅವಕಾಶ ಮಾಡಿಕೊಟ್ಟರು.

You may also like