Home » D K Shivkumar : ಕರ್ನಾಟಕದಲ್ಲಿ ‘ಥಗ್ ಲೈಫ್’ ರಿಲೀಸ್ ಗೆ ಸುಪ್ರೀಂ ಗ್ರೀನ್ ಸಿಗ್ನಲ್ – ರಾಜ್ಯದ ಜನರಲ್ಲಿ ವಿಶೇಷ ಮನವಿ ಇಟ್ಟ ಡಿಕೆ ಶಿವಕುಮಾರ್

D K Shivkumar : ಕರ್ನಾಟಕದಲ್ಲಿ ‘ಥಗ್ ಲೈಫ್’ ರಿಲೀಸ್ ಗೆ ಸುಪ್ರೀಂ ಗ್ರೀನ್ ಸಿಗ್ನಲ್ – ರಾಜ್ಯದ ಜನರಲ್ಲಿ ವಿಶೇಷ ಮನವಿ ಇಟ್ಟ ಡಿಕೆ ಶಿವಕುಮಾರ್

by V R
0 comments

D K Shivkumar : ಕನ್ನಡದ ಹುಟ್ಟಿನ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಕಮಲ್ ಹಾಸನ್ ಅವರ ‘ಥಗ್ ಲೈಫ್’ ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡದಿರಲು ಕನ್ನಡ ಪರ ಸಂಘಟನೆಗಳು ನಿರ್ಧರಿಸಿದ್ದವು. ಆದರೆ ಈಗ ಸುಪ್ರೀಂ ಕೋರ್ಟ್ ಕರ್ನಾಟಕದಲ್ಲಿ ಈ ಚಿತ್ರ ರಿಲೀಸ್ ಗೆ ಗ್ರೀನ್ ಸಿಗ್ನಲ್ ನೀಡಿದೆ. ಈ ಬೆನ್ನಲ್ಲೇ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ರಾಜ್ಯದ ಜನರಲ್ಲಿ ವಿಶೇಷ ಮನವಿ ಇಟ್ಟಿದ್ದಾರೆ.

 

ಹೌದು, ಥಗ್ ಲೈಫ್’ ಚಿತ್ರ ಬಿಡುಗಡೆಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದ್ದು, ಈ ಸಂಬಂಧ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಕನ್ನಡಪರ ಸಂಘಟನೆಗಳಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ (DCM D.K. Shivakumar) ಮನವಿ ಮಾಡಿದ್ದಾರೆ.

 

ಅಲ್ಲದೆ ಕಮಲ್ ಹಾಸನ್ ಕೇಸ್‌ನಲ್ಲಿ ಕೋರ್ಟ್ ಏನು ಆದೇಶ ನೀಡಿದೆಯೋ ಅದನ್ನು ನಾವು ಗೌರವದಿಂದ ಪಾಲನೆ ಮಾಡಬೇಕಿದೆ. ಈ ನಡುವೆ ನಾನು ಕನ್ನಡ ಪರ ಸಂಘಸಂಸ್ಥೆಗಳಿಗೆ ಮನವಿ ಮಾಡುತ್ತೇನೆ. ನಾವು ಒಂದು ಮಿತಿ ಇಟ್ಟುಕೊಳ್ಳಬೇಕು. ಯಾರು ಕೂಡ ಕಾನೂನೂನನ್ನು ಕೈಗೆ ಎತ್ತಿಕೊಳ್ಳಬಾರದು. ಕರ್ನಾಟಕ ಶಾಂತಿಯ ನಾಡು, ಎಲ್ಲರಿಗೂ ಅವರವರ ಅಭಿಪ್ರಾಯ ಹೇಳುವುದಕ್ಕೆ ಅವಕಾಶ ಇದೆ ಎಂದು ತಿಳಿಸಿದ್ದಾರೆ.

You may also like