Home » Surathkal: ನನ್ನ ಜೊತೆ ಬಾ, ಇಲ್ಲ 24 ತುಂಡು ಮಾಡುವೆ ಪ್ರಕರಣ; ಯುವತಿ ಆತ್ಮಹತ್ಯೆಗೆ ಯತ್ನ

Surathkal: ನನ್ನ ಜೊತೆ ಬಾ, ಇಲ್ಲ 24 ತುಂಡು ಮಾಡುವೆ ಪ್ರಕರಣ; ಯುವತಿ ಆತ್ಮಹತ್ಯೆಗೆ ಯತ್ನ

1 comment

Surathkal: ಯುವತಿಯೋರ್ವಳು ಫೇಸ್ಬುಕ್‌ ಮೆಸೇಂಜರ್‌ ಮೂಲಕ ಅಶ್ಲೀಲ ಮೆಸೇಜ್‌ ಮಾಡಿ, ತನ್ನ ಜೊತೆ ಬರದಿದ್ದರೆ 24 ತುಂಡು ಮಾಡಿ ಬಿಸಾಡುವೆ ಎಂದು ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಡ್ಯಾ ನಿವಾಸಿ ಶಾರಿಕ್‌ ನೂರ್ಜಹಾನ್‌ ನನ್ನು ಬಂಧನ ಮಾಡಲಾಗಿದೆ.

ಪೊಲೀಸರು ಆರೋಪಿ ವಿರುದ್ಧ ಕ್ಷಿಪ್ರ ಕಾರ್ಯಾಚರಣೆ ಮಾಡದ ಕಾರಣ ಸಂತ್ರಸ್ತ ಯುವತಿ ಆತ್ಮಹತ್ಯೆಗೆ ಯತ್ನ ಮಾಡಿರುವ ಘಟನೆ ನಡೆದಿದೆ. ಈ ಘಟನೆ ನಡೆದ ಬೆನ್ನಲ್ಲೇ ಪೊಲೀಸ್‌ ವೈಫಲ್ಯದ ವಿರುದ್ಧ ಶಾಸಕ ಡಾ.ಭರತ್‌ ಶೆಟ್ಟಿ ವೈ ಅವರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೊಲೀಸರು ಯುವತಿಯ ಕುಟುಂಬಸ್ಥರು ದೂರು ದಾಖಲಿಸುವ ಸಂದರ್ಭದಲ್ಲಿ ನಿರ್ಲಕ್ಷ್ಯ ವಹಿಸಿರುವ ಖಂಡನೀಯ. ಯುವತಿ ಇದೀಗ ಜೀವನ್ಮರಣ ಹೋರಾಟದಲ್ಲಿದ್ದು, ಇದರ ಜವಾಬ್ದಾರಿಯನ್ನು ಪೊಲೀಸರೇ ಹೊರಬೇಕು ಎಂದು ಡಾ.ಭರತ್‌ ಶೆಟ್ಟಿ ವೈ ಹೇಳಿದರು. ಇದರ ಜೊತೆಗೆ ಹಿಂದೂ ಕಾರ್ಯಕರ್ತರು ಸಹನೆ ಕಳೆದುಕೊಳ್ಳುವ ಮೊದಲು ಜಿಲ್ಲಾಡಳಿತ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯ ಮಾಡಿದ್ದಾರೆ.

You may also like

Leave a Comment