Home » Surendra Kewat Shot Dead: ಉದ್ಯಮಿ ಗೋಪಾಲ್‌ ಖೇಮ್ಕಾ ಹತ್ಯೆ ನಡೆದ ನಂತರ ಇದೀಗ ಇನ್ನೋರ್ವ ಬಿಜೆಪಿ ನಾಯಕನ ಗುಂಡಿಕ್ಕಿ ಹತ್ಯೆ

Surendra Kewat Shot Dead: ಉದ್ಯಮಿ ಗೋಪಾಲ್‌ ಖೇಮ್ಕಾ ಹತ್ಯೆ ನಡೆದ ನಂತರ ಇದೀಗ ಇನ್ನೋರ್ವ ಬಿಜೆಪಿ ನಾಯಕನ ಗುಂಡಿಕ್ಕಿ ಹತ್ಯೆ

by V R
0 comments

Surendra Shot dead: ಉದ್ಯಮಿ ಗೋಪಾಲ್‌ ಖೇಮ್ಕಾ ಹತ್ಯೆ ನಡೆದ ನಂತರ ಇದೀಗ ಬಿಹಾರದಲ್ಲಿ ಇನ್ನೋರ್ವ ಬಿಜೆಪಿ ನಾಯಕರೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಸುರೇಂದ್ರ ಕೆವಾತ್‌ ಮೃತ ವ್ಯಕ್ತಿ. ಬಿಹ್ತಾ-ಸರ್ಮೇರಾ ರಾಜ್ಯ ಹೆದ್ದಾರಿಯಲ್ಲಿರುವ ತಮ್ಮ ಜಮೀನಿನ ಬಳಿ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಕೆವಾತ್‌ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ನಾಲ್ಕು ಬಾರಿ ಗುಂಡು ಹಾರಿಸಿ ಕೊಲೆ ಮಾಡಲಾಗಿದೆ. ತಮ್ಮ ಜಮೀನಿನಲ್ಲಿ ನೀರಾವರಿಗೆ ಸಂಬಂಧಪಟ್ಟ ಕೆಲಸ ಮಾಡುವ ಸಂದರ್ಭದಲ್ಲಿ ಸುರೇಂದ್ರ ಅವರ ಹತ್ಯೆ ಮಾಡಲಾಗಿದೆ. ಸುರೇಂದ್ರ ಕೆವಾತ್‌ ಪಶು ವೈದ್ಯರಾಗಿದ್ದು, ತಮ್ಮ ಕುಟುಂಬದ ಶೇಖ್‌ಪುರ ಗ್ರಾಮದಲ್ಲಿ ವಾಸಿಸುತ್ತಿದ್ದು, ಪುನ್‌ಪುನ್‌ ಬ್ಲಾಕ್‌ನಲ್ಲಿ ಬಿಜೆಪಿ ಕಾರ್ಯಕರ್ತರಾಗಿದ್ದರು.

ಒಂದೇ ವಾರದ ಅವಧಿಯಲ್ಲಿ ಪಾಟ್ನಾದಲ್ಲಿ ಇದು ಎರಡನೇ ಹತ್ಯೆ. ಈ ಮೊದಲು ಉದ್ಯಮಿ ಗೋಪಾಲ್‌ ಖೇಮ್ಕಾ ಅವರನ್ನು ಗುಂಡಿಕ್ಕಿ ಕೊಲೆ ಮಾಡಲಾಗಿತ್ತು.

You may also like