RSS : ರಾಜ್ಯದಲ್ಲಿ ಆರ್ ಎಸ್ ಎಸ್ ಬ್ಯಾಂಕ್ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಇದರೊಂದಿಗೆ ಆರ್ ಎಸ್ ಎಸ್ ಹಾಗೂ ಕಾಂಗ್ರೆಸ್ ನಡುವೆ ತಿಕ್ಕಾಟ ಜೋರಾಗಿದೆ. ನೀ ನಡುವೆ ಮಂತ್ರಾಲಯದ ರಾಘವೇಂದ್ರ ಮಠದ ಶ್ರೀಗಳು RSS ಸೇರ್ಪಡೆ ಬಗ್ಗೆ ಹೇಳಿಕೆ ಒಂದನ್ನು ನೀಡಿದ್ದಾರೆ.
ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಮಹತ್ವದ ಹೇಳಿಕೆ ಕೊಟ್ಟಿದ್ದು, ಆರ್‌ಎಸ್‌ಎಸ್ ದೇಶಭಕ್ತಿಯನ್ನು ಮೂಡಿಸುವ ಸಂಸ್ಥೆಯಾಗಿದೆ. ಇದರಲ್ಲಿ ಭಾಗಿಯಾಗಿ ದೇಶದ ಸಮಗ್ರತೆ ಹೋರಾಡಬೇಕು. RSS ಯಾವುದೇ ರಾಜಕೀಯ ಪಕ್ಷವಲ್ಲ. ದೇಶದ್ರೋಹಿ ಸಂಘಟನೆಯಾಗಲಿ ಅಲ್ಲ. ಇದು ದೇಶದ ಭದ್ರತೆ, ಐಕ್ಯತೆ ಮತ್ತು ದೇಶದ ಅಭಿಮಾನವನ್ನು ಮೂಡಿಸುವ ಸಂಸ್ಥೆಯಾಗಿದೆ ಎಂದು ಹೇಳಿದ್ದಾರೆ.
ಅಲ್ಲದೆ ಇಂತಹ ಸಂಸ್ಥೆಯಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಯೂ ಭಾಗಿಯಾಗಿ ದೇಶದ ಶ್ರೇಷ್ಠತೆ ಮತ್ತು ಸಮಗ್ರತೆಗಾಗಿ ಹೋರಾಡಬೇಕು. ಇದು ನಮ್ಮೆಲ್ಲರ ಕರ್ತವ್ಯವಾಗಿದೆ. ದೇಶದ ಭಾವನೆಯನ್ನು ಹೊಂದಿರುವ ಯಾರಾದರೂ ಸ್ವ ಇಚ್ಛೆಯಿಂದ RSS ನಲ್ಲಿ ಭಾಗಿಯಾಗಬಹುದು ಎಂದು ಶ್ರೀಗಳು ಅಭಿಪ್ರಾಯಪಟ್ಟಿದ್ದು, ಆರ್‌ಎಸ್‌ಎಸ್‌ಗೆ ಹೋಗಬಾರದು ಎಂದು ಹೇಳುವುದು ಸಂವಿಧಾನದ ವಿರೋಧವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
