Mangalore: ಕರ್ನಾಟಕ ವಿಧಾನ ಸಭಾ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ವಿವಿಧ ಸಾಮಾಜಿಕ ಜಾಲ ತಾಣಗಳಲ್ಲಿ ಜಾತಿ, ಧರ್ಮ ಮತ್ತು ಪ್ರದೇಶ ಆಧಾರಿತಾಗಿ ಶಾಂತಿ ಮತ್ತು ಸೌಹಾರ್ಧತೆಗೆ ಧಕ್ಕೆ ಉಂಟು ಮಾಡುವಂತಹ ಮತ್ತು ವೈಯುಕ್ತಿಕ ನಿಂದನೆ ಮಾಡುವಂತಹ ದ್ವೇಷ ಪೂರಿತ ಮತ್ತು ಪ್ರಚೋದನಾತ್ಮಕ ಸಂದೇಶಗಳನ್ನು ಪೋಸ್ಟ್ ಮಾಡುತ್ತಿರುವ ಬಗ್ಗೆ, ಪೊಲೀಸ್ ಆಯುಕ್ತರು, ಮಂಗಳೂರು(Mangalore) ನಗರ ಇವರು ಇಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
“ಸೋಶಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್’ ನ ವಿವಿಧ ತಂಡಗಳನ್ನು ರಚಿಸಿದ್ದು, ಇಂತಹ ದ್ವೇಷದ ಹಾಗೂ ಶಾಂತಿ ಮತ್ತು ಸೌಹಾರ್ಧತೆಗೆ ಧಕ್ಕೆ ಉಂಟು ಮಾಡುವ ಪೋಸ್ಟ್ಗಳ ಬಗ್ಗೆ ನಿಗಾ ವಹಿಸಲಾಗುತ್ತಿದ್ದು, ಕಾನೂನು ಬಾಹಿರ ಮತ್ತು ದ್ವೇಷವನ್ನುಂಟುಮಾಡುವಂತಹ ಸಂದೇಶಗಳನ್ನು ಪೋಸ್ಟ್ ಮಾಡುವುದು, ಫಾರ್ವರ್ಡ್ ಮಾಡುವುದು, ಲೈಕ್ ಮಾಡುವುದು ಮತ್ತು ಕಮೆಂಟ್ ಮಾಡುವುದು ಅಪರಾಧವಾಗಿದ್ದು, ಕಾನೂನು ಬಾಹಿರ ಮತ್ತು ದ್ವೇಷವನ್ನುಂಟುಮಾಡುವಂತಹ ಸಂದೇಶಗಳನ್ನು ಪೋಸ್ಟ್ ಮಾಡುವವರು, ಫಾರ್ವರ್ಡ್ ಮಾಡುವವರು. ಲೈಕ್ ಮಾಡುವವರು ಮತ್ತು ಕಮೆಂಟ್ ಮಾಡುವವರ ವಿರುದ್ಧ ಪ್ರಕರಣ ದಾಖಲಸಿ ಸೂಕ್ತ ಕಾನೂನುಕ್ರಮ ಕೈಗೊಳ್ಳಲಾಗುವುದು.
ಅಲ್ಲದೇ ಸಾರ್ವಜನಿಕರು ಯಾವುದೇ ರೀತಿಯ ಸುಳ್ಳು ಸುದ್ದಿ ಮತ್ತು ದ್ವೇಷದ ಸಂದೇಶಗಳಿಗೆ ಕಿವಿಗೊಡಬಾರದೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನು ಓದಿ: Curry Leaves: ನಿಮ್ಮ ಕೂದಲಿಗೆ ಕರಿಬೇವಿನ ಎಲೆಗಳಿಂದ ಅದ್ಭುತ ಪ್ರಯೋಜನ ಈ ರೀತಿಯಲ್ಲಿ! ಇದನ್ನು ಓದಿ, ಕಂಪ್ಲೀಟ್ ವಿವರ ಇಲ್ಲಿದೆ
