Home » Prajwal Revanna: ಪ್ರಜ್ವಲ್ ರೇವಣ್ಣ ಹಾಸನದಿಂದ ಗೆದ್ದರೆ ಅಮಾನತು – BJP ಯಿಂದ ಬಿಗ್ ಸ್ಟೇಟ್ಮೆಂಟ್ !

Prajwal Revanna: ಪ್ರಜ್ವಲ್ ರೇವಣ್ಣ ಹಾಸನದಿಂದ ಗೆದ್ದರೆ ಅಮಾನತು – BJP ಯಿಂದ ಬಿಗ್ ಸ್ಟೇಟ್ಮೆಂಟ್ !

5 comments
Prajwal Revanna

Prajwal Revanna: ಹಾಸನದಿಂದ ಪ್ರಜ್ವಲ್ ರೇವಣ್ಣ ಈಗ ಗೆದ್ದರೆ, ಗೆದ್ದರೂ ಸೋತಂತೆ. ಹೌದು, ಪ್ರಜ್ವಲ್ ರೇವಣ್ಣ ಗೆದ್ದರೆ ನಾವು ಎನ್‌ಡಿಎ (NDA) ವತಿಯಿಂದ ಅಮಾನತು ಮಾಡ್ತೀವಿ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ (R Ashoka) ಖಡಕ್ ಆಗಿ ಸುದ್ದಿಗೋಷ್ಠಿಯಲ್ಲಿ ಪ್ರಸ್ತಾಪಿಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿ ನಡೆದಿದ್ದು ಆರ್ ಅಶೋಕ್ ಅವರು, ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದು, ಪ್ರಜ್ವಲ್‌ಗೆ ಯಂಗ್ ಲೀಡರ್ ಮತ್ತು ವಿಜನ್ ಲೀಡರ್ ಅಂತ ಹೇಳಿದ ಸಿದ್ದರಾಮಯ್ಯ (Siddaramaiah) ರವರು ಈಗ ಉತ್ತರ ಕೊಡಬೇಕಾಗಿದೆ. ಅವರು ಟಿಕೆಟ್ ಕೊಟ್ಟಿದ್ದು 5 ವರ್ಷದ ಅವಧಿಗೆ. ಸಿದ್ದರಾಮಯ್ಯ ಹೇಳಿದಂತೆ ಪ್ರಜ್ವಲ್ ವಿಜನ್ ತೋರಿಸಿದ್ದಾರೆ. ಪ್ರಜ್ವಲ್ ಈಗ ಗೆದ್ದರೆ ನಾವು ಎನ್‌ಡಿಎ ವತಿಯಿಂದ ಅಮಾನತು ಮಾಡ್ತೀವಿ ಎಂದು ಅಶೋಕ್ ಅವರು ಸ್ಪಷ್ಟವಾಗಿ ಹೇಳಿದ್ದಾರೆ.

ಇನ್ನು ಇದೇ ವೇಳೆ ರೇವಣ್ಣ ಬಂಧನ ವಿಚಾರ ಪ್ರಸ್ತಾಪಿಸಿದ ಅಶೋಕ್, ಹೆಚ್.ಡಿ ರೇವಣ್ಣ ಬಂಧನ (HD Revanna Arrest) ಸರಿಯಾದ ಸಮಯದಲ್ಲಿ ಆಗಿದೆ. ಮತ್ತು ಪೊಲೀಸರು ರೇವಣ್ಣ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಇದೇ ವೇಳೆ ಮೈತ್ರಿ ಮೇಲೆ ಪರಿಣಾಮ ಬೀರಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರತಿಪಕ್ಷ ನಾಯಕ, ಈಗಾಗಲೇ ಕುಮಾರಸ್ವಾಮಿ ಇದಕ್ಕೂ ಬಿಜೆಪಿಗೂ ಸಂಬಂಧ ಇಲ್ಲ ಎಂದಿದ್ದು, ಹೀಗಾಗಿ ಪ್ರಜ್ವಲ್ ಕೇಸ್ ರೇವಣ್ಣ ಬಂಧನದಿಂದ ಬಿಜೆಪಿಗೆ ಮುಜುಗರ ಆಗುತ್ತೆ ಅನ್ನೋ ಪ್ರಶ್ನೆಗೆ ಅವಕಾಶ ಇರುವುದಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಮತ್ತು ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಬೆಂಗಳೂರಿನಲ್ಲಿ FIR ದಾಖಲು !

You may also like

Leave a Comment