3
ಪುತ್ತೂರು: ಬೆಳ್ಳಿಪ್ಪಾಡಿ ಗ್ರಾಮದ ಕಟಾರದ ದಾರಂದಕುಕ್ಕು, ಕಟಾರ, ಆನಡ್ಕ ಸೇರುವ ಮೂರು ರಸ್ತೆ ಮಧ್ಯೆ ಬಾಳೆ ಎಲೆಯಲ್ಲಿ 25ಕ್ಕೂ ಹೆಚ್ಚು ಲಿಂಬೆ ಹಣ್ಣಿನ ತುಂಡುಗಳು, ನಾಲ್ಕೈದು ಬತ್ತಿಗಳು, ಸುತ್ತಲೂ ಸುರಿದ ಹೊದ್ದು ಒಡೆದ ತೆಂಗಿನ ಕಾಯಿಗಳು ಇರುವ ರೀತಿ ಕಂಡು ಬಂದಿದೆ.

ಈ ಘಟನೆ ಬೆಳಕಿಗೆ ಬಂದಿರುವು ಜ.18 ಎಂದು ವರದಿಯಾಗಿದ್ದು, ಇದೊಂದು ವಾಮಾಚಾರ ಪ್ರಯೋಗ ಆಗಿರಬಹುದೇ ಎನ್ನುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ ಎನ್ನಬಹುದು.
ಬೆಳ್ಳಿಪ್ಪಾಡಿ ಗ್ರಾಮದ ಕಟಾರದಲ್ಲಿರುವ ಅರಣ್ಯ ಜಾಗದಲ್ಲಿ ಇದು ಕಂಡು ಬಂದಿದೆ. ಬೆಳಿಗ್ಗೆ ಹಾಲಿನ ಡೈರಿಗೆ ಹೋಗುವವರಿಗೆ ದಾರಂದಕುಕ್ಕು, ಕಟಾರ ಮತ್ತು ಆನಡ್ಕ ಸೇರುವ ಮೂರು ಮಾರ್ಗದ ಮಧ್ಯೆ ಇದು ಗೋಚರಿಸಿದೆ. ವಿಚಾರ ತಿಳಿದು ಸ್ಥಳದಲ್ಲಿ ಜನರು ಸೇರಿದ್ದರು.

