Home » Karavara: ಅನುಮಾನ ಹುಟ್ಟಿಸಿದ ರಣಹದ್ದು! ಎಲೆಕ್ಟ್ರಾನಿಕ್ ಚಿಪ್ ಪತ್ತೆ!

Karavara: ಅನುಮಾನ ಹುಟ್ಟಿಸಿದ ರಣಹದ್ದು! ಎಲೆಕ್ಟ್ರಾನಿಕ್ ಚಿಪ್ ಪತ್ತೆ!

2 comments

Karavara: ಬೃಹತ್ ಗಾತ್ರದ ರಣಹದ್ದು ಒಂದು ಬೆನ್ನಿನ ಮೇಲೆ ಎಲೆಕ್ಟ್ರಾನಿಕ್ ಚಿಪ್ ಹೊಂದಿದ್ದು, ಕೈಗಾ ಅಣು ವಿದ್ಯುತ್‌ ಕೇಂದ್ರ ಹಾಗೂ ಕದಂಬ ನೌಕಾನೆಲೆ (Karavara) ಸಮೀಪದಲ್ಲೇ ಪತ್ತೆಯಾಗಿದ್ದು, ಅನುಮಾನಕ್ಕೆ ಕಾರಣವಾಗಿತ್ತು.

ಆರಂಭದಲ್ಲಿ ಶತ್ರು ದೇಶಗಳು ದುರುದ್ದೇಶ ಹಿನ್ನಲೆ ರಣಹದ್ದು ಬಳಸಿರಬಹುದೇ ಎಂಬ ಶಂಕೆ ಮೂಡಿತ್ತು. ಆದರೆ ಸ್ಥಳೀಯರ ಅರಣ್ಯಾಧಿಕಾರಿಗಳು, ಈ ರಣಹದ್ದು ಮಹಾರಾಷ್ಟ್ರದ ತಡೋಬಾ ರಾಷ್ಟ್ರೀಯ ಉದ್ಯಾನವನದಲ್ಲಿ, ರಣಹದ್ದುಗಳ ಬಗ್ಗೆ ಅಧ್ಯಯನ ಮಾಡುತ್ತಿರುವ ತಂಡಕ್ಕೆ ಸೇರಿದ್ದು ಎಂದು ತಿಳಿಸಿದ್ದಾರೆ.

ರಣಹದ್ದುಗಳ ಬಗ್ಗೆ ಅಧ್ಯಯನ ಮಾಡುತ್ತಿರುವ ಈ ತಂಡವು ‘ರಣಹದ್ದುಗಳ ಹೆಜ್ಜೆ ಮೂಡದ ಹಾದಿ, ಅವುಗಳ ಹಾರಾಟದ ವ್ಯಾಪ್ತಿ, ಸಂತಾನೋತ್ಪತ್ತಿ ಪ್ರಕ್ರಿಯೆ ಹಾಗೂ ಯಾವ ತಿಂಗಳಲ್ಲಿ ಯಾವ ಸ್ಥಳ ಹುಡುಕಿ ಹೊರಡುತ್ತವೆ ಎಂಬ ಕುರಿತು ಅಧ್ಯಯನ ನಡೆಸಲು ಈ ರಣ ಹದ್ದುಗಳಿಗೆ ಫೈಯಿಂಗ್ ಟ್ರ್ಯಾಕ್ ಯಂತ್ರ ಟ್ಯಾಗ್ ಮಾಡಲಾಗಿತ್ತು ಎಂದು ಮಾಹಿತಿ ತಿಳಿದು ಬಂದಿದೆ.

You may also like

Leave a Comment