Home » Suzuki Burgman Street : ಸುಜುಕಿ ಬರ್ಗಮನ್ ಸ್ಟ್ರೀಟ್ ಸ್ಕೂಟರ್ ಬಿಡುಗಡೆ | ಹೊಸ ಸಂಚಲನ ಮೂಡಿಸಲು ರೆಡಿ

Suzuki Burgman Street : ಸುಜುಕಿ ಬರ್ಗಮನ್ ಸ್ಟ್ರೀಟ್ ಸ್ಕೂಟರ್ ಬಿಡುಗಡೆ | ಹೊಸ ಸಂಚಲನ ಮೂಡಿಸಲು ರೆಡಿ

0 comments

ಭಾರತದಲ್ಲಿ ಸ್ಕೂಟರ್ ಮಾರಾಟದ ಟ್ರೆಂಡ್ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಕಂಪನಿಗಳು ಗ್ರಾಹಕರನ್ನು ಸೆಳೆಯಲು ಹೊಸ ಹೊಸ ಫೀಚರನ್ನೊಳಗೊಂಡ ದ್ವಿಚಕ್ರ ವಾಹನಗಳನ್ನು ಬಿಡುಗಡೆ ಮಾಡಿದೆ. ಇದೀಗ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಸುಜುಕಿ ಮೋಟಾರ್ ಸೈಕಲ್ ಕಂಪನಿಯು ಭಾರತದಲ್ಲಿ ಹೊಸ ಬರ್ಗಮನ್ ಸ್ಟ್ರೀಟ್ ಸ್ಕೂಟರ್ ಬಿಡುಗಡೆ ಮಾಡಿದೆ.

ಬರ್ಗಮನ್ ಸ್ಟ್ರೀಟ್ ಸ್ಕೂಟರ್ ಭಾರತದಲ್ಲಿ ಬಿಡುಗಡೆಗೊಂಡ ನಂತರ ಹಲವಾರು ಹೊಸ ದಾಖಲೆಗಳಿಗೆ ನಿರ್ಮಿಸಿದ್ದೂ, ಕಂಪನಿಯು ಹೊಸ ಸ್ಕೂಟರಿನಲ್ಲಿ ಇದೀಗ ಇಎಕ್ಸ್ ವೆರಿಯೆಂಟ್(EX Variant) ಬಿಡುಗಡೆ ಮಾಡಿದೆ. ಈ ಹೊಸ ಸ್ಕೂಟರ್ ಮಾದರಿ ಹಲವಾರು ಅಪ್ ಡೇಟ್ ಫೀಚರ್ಸ್ ಹೊಂದಿದ್ದು, ಮ್ಯಾಕ್ಸಿ ಸ್ಕೂಟರ್ ಪ್ರಿಯರನ್ನು ಸೆಳೆಯುತ್ತಿದೆ.

ಇಎಕ್ಸ್ ವೆರಿಯೆಂಟ್ ಸಾಮಾನ್ಯ ಮಾದರಿಗಿಂತ ಹೆಚ್ಚಿನ ಫೀಚರ್ಸ್ ಮತ್ತು ಪರ್ಫಾಮೆನ್ಸ್ ಹೊಂದಿರಲಿದೆ. ಹೊಸ ಸ್ಕೂಟರ್ ನಲ್ಲಿ ಸುಜುಕಿ ಕಂಪನಿಯು 124 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಜೋಡಿಸಿದ್ದು, ಇದು ಇಕೋ ಪರ್ಫಾಮೆನ್ಸ್ ಆಲ್ಫಾ ತಂತ್ರಜ್ಞಾನ ಹೊಂದಿದೆ. ಈ ಮೂಲಕ ಇದು 8.5 ಹಾರ್ಸ್ ಪವರ್ ಮತ್ತು 10.2 ಎನ್ಎಂ ಟಾರ್ಕ್ ಉತ್ಪಾದಿಸುತ್ತಿದೆ. ಟಾಪ್ ವೆರಿಯೆಂಟ್ ನಲ್ಲಿ ದೊಡ್ಡದಾದ 12-ಇಂಚಿನ ವ್ಹೀಲ್ ನೀಡಲಾಗಿದ್ದು, ಜೊತೆಗೆ ಅಗಲವಾದ ಟೈರ್‌ ನೀಡಲಾಗಿದೆ.

ಬರ್ಗಮನ್ ಸ್ಟ್ರೀಟ್ ಇಎಕ್ಸ್ ಸ್ಕೂಟರಿನ ಎಂಜಿನ್ ನಲ್ಲಿ ಸುಜುಕಿ ಕಂಪನಿಯು ಆಟೋ ಸ್ಟಾರ್ಟ್ ಮತ್ತು ಸ್ಟಾಪ್ ಸೌಲಭ್ಯ ನೀಡಿದ್ದೂ, ಮಿತಿವ್ಯಯ ಇಂಧನ ಬಳಕೆಯ ಜೊತೆಗೆ ಮಾಲಿನ್ಯ ಹೊರಸೂಸುವಿಕೆ ಪ್ರಮಾಣ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದಲ್ಲದೇ ಹೊಸ ಸ್ಕೂಟರ್ ನಲ್ಲಿ ಸೈಲೆಂಟ್ ಸ್ಟಾರ್ಟರ್ ಸಿಸ್ಟಂ ಜೋಡಣೆ ಪಡೆದುಕೊಂಡಿದ್ದೂ, ಟ್ರಾಫಿಕ್‌ನಲ್ಲಿ ನಿಂತಾಗ ಕೆಲವು ಸೆಕೆಂಡುಗಳ ನಂತರ ಎಂಜಿನ್ ನಿಷ್ಕ್ರೀಯವಾಗುತ್ತದೆ. ನಂತರ ರೈಡರ್ ಥ್ರೊಟಲ್ಸ್ ಮಾಡಿದಾಗಲೇ ಆಟೋ ಸ್ಟಾರ್ಟ್ ಆಗಿ ಮರು ಪ್ರಾರಂಭಗೊಳ್ಳುತ್ತದೆ.

ಇಷ್ಟೇ ಅಲ್ಲದೆ ಹೊಸ ಸ್ಕೂಟರಿನಲ್ಲಿ ರೈಡ್ ಕನೆಕ್ಟ್ ಸಿಸ್ಟಮ್‌ ಜೋಡಿಸಲಾಗಿದೆ. ಇದು ಬ್ಲೂಟೂತ್ ಸಕ್ರಿಯಗೊಂಡಿರುವ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್ ಹೊಂದಿರಲಿದ್ದು, ಇದರಲ್ಲಿ ಹಲವಾರು ಸೇವೆಗಳನ್ನು ಪಡೆದುಕೊಳ್ಳಬಹುದು. ಇದರಲ್ಲಿ ಇನ್ ಕಾಮಿಂಗ್ ಕಾಲ್, ಎಸ್ಎಂಎಸ್ ಮತ್ತು ವಾಟ್ಸ್ ಅಪ್ ಅಲರ್ಟ್, ಮಿಸ್ಡ್ ಕಾಲ್ ಮತ್ತು ಎಸ್ಎಂಎಸ್ ಅಲರ್ಟ್ ನೀಡುತ್ತದೆ. ಹಾಗೆಯೇ ಸುರಕ್ಷತೆಗಾಗಿ ಅತಿ ವೇಗದಲ್ಲಿರುವಾಗ ಅಲರ್ಟ್ ಮಾಡುವುದರ ಜೊತೆಗೆ ಫೋನ್ ಚಾರ್ಜ್ ಮಟ್ಟದ ಕುರಿತು ಮಾಹಿತಿ ಒದಗಿಸುತ್ತದೆ.

ಬರ್ಗಮನ್ ಸ್ಟ್ರೀಟ್ ಹೊಸ ಇಎಕ್ಸ್ ವೆರಿಯೆಂಟ್ ಟಾಪ್ ಎಂಡ್ ಮಾದರಿಯಾಗಿದ್ದು, ಇದು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 1 ಲಕ್ಷ 12 ಸಾವಿರದ ಮನ್ನೂರು ಬೆಲೆ ಹೊಂದಿದೆ. ಇದರೊಂದಿಗೆ ಇದು ಉತ್ತಮ ಪರ್ಫಾಮೆನ್ಸ್ ಜೊತೆಗೆ ಈ ವಿಭಾಗದಲ್ಲಿಯೇ ಗರಿಷ್ಠ ಮೈಲೇಜ್ ಅನ್ನು ನೀಡಲು ಸಹಕಾರಿಯಾಗಿದೆ. ಇನ್ನೇಕೆ ತಡ ಇಷ್ಟೆಲ್ಲಾ ವೈಶಿಷ್ಟ್ಯಗಳನ್ನೊಳಗೊಂಡ ಸ್ಕೂಟರನ್ನು ಇಂದೇ ಖರೀದಿಸಿ.

You may also like

Leave a Comment