1
Haveri Swathi Death Case: ನರ್ಸ್ ಸ್ವಾತಿ ಲವ್ ಜಿಹಾದ್‌ಗೆ ಸಾವಿಗೀಡಾದಳೇ? ಎಂದು ಹಿಂದೂ ಪರ ಸಂಘಟನೆಗಳು ಸೇರಿ ಬಿಜೆಪಿ ನಾಯಕರು ಆರೋಪ ಮಾಡಿದ್ದಾರೆ. ಇದೀಗ ನಯಾಜ್ ಜೊತೆಗೆ ಕೊಲೆ ಮಾಡಿ ನಂತರ ತಲೆಮರೆಸಿಕೊಂಡಿದ್ದ ಮತ್ತಿಬ್ಬರು ಹಿಂದೂ ಯುವಕರನ್ನು ಪೊಲೀಸರು ಬಂಧನ ಮಾಡಿದ್ದಾರೆ.

ನರ್ಸ್ ಸ್ವಾತಿ ಹತ್ಯೆ ರಾಜ್ಯದಲ್ಲಿ ಭಾರೀ ಸಂಚಲನವನ್ನು ಉಂಟು ಮಾಡಿದೆ. ನಯಾಜ್ ಎಂಬಾತನೇ ಸ್ವಾತಿ ಹತ್ಯೆಯ ಪ್ರಮುಖ ಆರೋಪಿ.
ಸ್ವಾತಿಯನ್ನು ಲವ್ ಮಾಡುತ್ತಿದ್ದ ಎನ್ನಲಾದ ನಯಾಜ್ ಈತ ತನ್ನ ಮತ್ತಿಬ್ಬರು ಸ್ನೇಹಿತರ ಜೊತೆ ಸೇರಿ ಸ್ವಾತಿ ಕೊಲೆ ಮಾಡಿದ್ದಾನೆ. ನಯಾಜ್‌ನನ್ನು ಬಂಧನ ಮಾಡಿರುವ ಪೊಲೀಸರು, ತನಿಖೆ ಆರಂಭಿಸಿದಾಗ ತನ್ನ ಮತ್ತಿಬ್ಬರು ಸ್ನೇಹಿತರಾದ ವಿನಯ್, ದುರ್ಗಾಚಾರಿ ಪತ್ತೆ ಹಚ್ಚಿ ಬಂಧನ ಮಾಡಿದ್ದಾರೆ.
