Home » LPG Gas Cylinder Price: ಗ್ರಾಹಕರಿಗೆ ಸಿಹಿ ಸುದ್ದಿ: LPG ಸಿಲಿಂಡರ್‌ ಬೆಲೆಯಲ್ಲಿ ಇಳಿಕೆ

LPG Gas Cylinder Price: ಗ್ರಾಹಕರಿಗೆ ಸಿಹಿ ಸುದ್ದಿ: LPG ಸಿಲಿಂಡರ್‌ ಬೆಲೆಯಲ್ಲಿ ಇಳಿಕೆ

by Mallika
0 comments

LPG Gas Cylinder Price: ಎಲ್‌ಪಿಜಿ ಬಳಕೆದಾರರಿಗೆ ಸಿಹಿ ಸುದ್ದಿ. ಜುಲೈ 1 ರಂದು ಎಲ್‌ಪಿಜಿ ಸಿಲಿಂಡರ್‌ಗಳ ದರದಲ್ಲಿ ಪರಿಷ್ಕರಣೆ ಆಗಿದೆ. ಈ ತಿಂಗಳು ಸಿಲಿಂಡರ್‌ ಬೆಲೆ ಕಡಿಮೆಯಾಗಿದೆ. ತೈಲ ಕಂಪನಿಗಳು 19 ಕೆಜಿ ವಾಣಿಜ್ಯ ಸಿಲಿಂಡರ್‌ ದರವನ್ನು ಸುಮಾರು 58.50 ರೂ ಗಳಷ್ಟು ಕಡಿಮೆ ಮಾಡಿದೆ.

ಆದರೆ 14.2 ಕೆಜಿ ಗೃಹ ಬಳಕೆಯ ಸಿಲಿಂಡರ್‌ ದರದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ದೇಶದ ರಾಜಧಾನಿ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಬೆಲೆ 1,665 ರೂ. ಆಗಿದೆ. ಜೂನ್‌ನಲ್ಲಿ 19 ಕೆಜಿ ಸಿಲಿಂಡರ್ ಬೆಲೆ 1723.50 ರೂ. ಆಗಿತ್ತು. ಕೋಲ್ಕತ್ತಾದಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 1826 ರೂ. ಗಳ ಬದಲಾಗಿ 1769 ರೂಪಾಯಿಗೆ ಸಿಗಲಿದೆ. ಮುಂಬೈನಲ್ಲಿ 1674.50 ರೂ.ಗಳ ಬದಲಿಗೆ 1616 ರೂ ಮತ್ತು ಚೆನ್ನೈನಲ್ಲಿ 1823.50 ರೂ.ಗಳ ಬದಲಿಗೆ 1881 ರೂ.ಗೆ 19 ಕೆಜಿ ಎಲ್‌ಪಿಜಿ ಸಿಲಿಂಡರ್ ಸಿಗಲಿದೆ. ಬೆಂಗಳೂರಿನಲ್ಲಿಯೂ 19 ಕೆಜಿ ಸಿಲಿಂಡರ ಬೆಲೆಯಲ್ಲಿ 58.50 ರು.ಗಳಷ್ಟು ಕಡಿಮೆಯಾಗಿದೆ.

ಇದನ್ನೂ ಓದಿ: MP: ರಸ್ತೆ ಅಪಘಾತದಲ್ಲಿ ಸಾವನ್ನುಪ್ಪಿದ ಗಂಡು ಹಾವು – ಪಕ್ಕದಲ್ಲಿ 24 ಗಂಟೆಗಳ ಕಾಲ ಇದ್ದು, ದುಃಖಿಸಿ ಪ್ರಾಣ ಬಿಟ್ಟ ಹೆಣ್ಣು ಹಾವು!!

You may also like