4
Swimming Pool: ಈಜುಕೊಳದಲ್ಲಿ ಸ್ವಿಮ್ಮಿಂಗ್ ಸಂದರ್ಭ ಅವಘಡ ಸಂಭವಿಸಿ ಯುವಕ ಸಾವಿಗೀಡಾದ ಘಟನೆ ಬೀದರ್‌ನ ನರಸಿಂಹ ಝರಣಿ ದೇವಸ್ಥಾನದ ಹತ್ತಿರ ಇರುವ ಈಜುಕೊಳದಲ್ಲಿ ನಡೆದಿದೆ.
ಬೀದರ್‌ನ ಫೈಜ್‌ದರ್ಗಾ ಕಾಲನಿ ನಿವಾಸಿ ಸೈಯದ್ ಅಫಾನ್ (19) ಮೃತ ಯುವಕ.
ಸ್ನೇಹಿತರ ಜೊತೆ ಈಜಲು ಹೋದ ಸಂದರ್ಭದಲ್ಲಿ ತಲೆಯ ಹಿಂಭಾಗಕ್ಕೆ ಗಂಭೀರ ಪೆಟ್ಟಾಗಿ ಯುವಕ ಪೂಲ್‌ನಲ್ಲಿಯೇ ಮುಳುಗಿ ಸಾವಿಗೀಡಾಗಿದ್ದಾನೆ. ಈಜುಕೊಳದಲ್ಲಿ ಪಲ್ಟಿ ಹೊಡೆಯುವ ಸಂದರ್ಭದಲ್ಲಿ ತಲೆಗೆ ಗಂಭೀರ ಪೆಟ್ಟಾಗಿರುವ ಸಂಶಯ ವ್ಯಕ್ತವಾಗಿದೆ.
ಮೃತ ಯುವಕನ ಕುಟುಂಬದವರು ಈಜುಕೊಳ ಮಾಲೀಕರ ವಿರುದ್ಧ ನಿರ್ಲಕ್ಷ್ಯ ಆರೋಪ ಹೊರಿಸಿದ್ದಾರೆ. ಘಟನೆ ಕುರಿತಂತೆ ಬೀದರ್‌ನ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
