Home » ಸಾಮಾಜಿಕ ಜಾಲತಾಣದಲ್ಲಿ ಯುವತಿಯ ನಕಲಿ ಖಾತೆ ಸೃಷ್ಟಿ | ಕೊಲ್ಕತ್ತಾ ಪೊಲೀಸರಿಂದ ಕಡಬದ ಯುವಕನ ಬಂಧನ

ಸಾಮಾಜಿಕ ಜಾಲತಾಣದಲ್ಲಿ ಯುವತಿಯ ನಕಲಿ ಖಾತೆ ಸೃಷ್ಟಿ | ಕೊಲ್ಕತ್ತಾ ಪೊಲೀಸರಿಂದ ಕಡಬದ ಯುವಕನ ಬಂಧನ

by Praveen Chennavara
0 comments

ಕೊಲ್ಕತ್ತಾದ ಯುವತಿಯೋರ್ವಳ ಸಾಮಾಜಿಕ ಜಾಲತಾಣ ಖಾತೆಯನ್ನು ನಕಲಿ ಮಾಡಿದ ಹಿನ್ನೆಲೆಯಲ್ಲಿ ಕಡಬದ ಯುವಕನನ್ನು ಪಶ್ಚಿಮ ಬಂಗಾಳ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಕಡಬ ತಾಲೂಕಿನ ನೂಜಿಬಾಳ್ತಿಲ ನಿವಾಸಿ ಯಾಗಿರುವ,ಕಾಂಗ್ರೆಸ್ ಮುಖಂಡ ಬಾಲಕೃಷ್ಣ ಬಳ್ಳೇರಿ ಅವರ ಪುತ್ರ ಮಂಗಳೂರಿನಲ್ಲಿ ಟ್ರೇಡಿಂಗ್ ವ್ಯವಹಾರ ಮಾಡುತ್ತಿರುವ ಸಂಜಯ ಕೃಷ್ಣ ಎಂದು ಗುರುತಿಸಲಾಗಿದೆ.

ಬೆಂಗಳೂರಿನ ಕಾಲೇಜೊಂದರಲ್ಲಿ ವಿಧ್ಯಾಭ್ಯಾಸ ಮಾಡುತ್ತಿರುವ ಪಶ್ಚಿಮ ಬಂಗಾಳದ ಯುವತಿಯ ಖಾತೆಯನ್ನು ಯಾರೋ ಅಪರಿಚಿತರು ನಕಲಿಸಿ ಉಪಯೋಗಿಸಿರುವ ಬಗ್ಗೆ ಯುವತಿಯು ಪಶ್ಚಿಮ ಬಂಗಾಳದಲ್ಲಿ ಸೈಬರ್‌ ಕ್ರೈಂ ನಡಿಯಲ್ಲಿ ದೂರು ದಾಖಲಿಸಿದ್ದರು.

ಬಳಿಕ ಪ್ರಕರಣದ ಜಾಡು ಹಿಡಿದು ಎರಡು ದಿನಗಳ ಹಿಂದೆ ಕಡಬಕ್ಕೆ ಆಗಮಿಸಿದ ಕೊಲ್ಕತ್ತಾದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

You may also like

Leave a Comment