2
ಕಡಬ:ರಾಜಸ್ಥಾನದಲ್ಲಿ ಟೈಲರ್ ಅಂಗಡಿಗೆ ಗ್ರಾಹಕರ ಸೋಗಿನಲ್ಲಿ ಬಂದು ಐಸಿಸ್ ಉಗ್ರರ ರೀತಿಯಲ್ಲಿ ಶಿರಚ್ಛೇದ ನಡೆಸಿ,ಕೃತ್ಯದ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಘಟನೆಯನ್ನು ಖಂಡಿಸಿ ಇಂದು ಆಲಂಕಾರಿನಲ್ಲಿ ನಲ್ಲಿ ಬೃಹತ್ ಪ್ರತಿಭಟನೆಗೆ ಹಿಂಜಾವೆ ಕಡಬ ತಾಲೂಕು ಕರೆ ನೀಡಿದೆ.
ಕೃತ್ಯ ಎಸಗಿದ ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎನ್ನುವ ಆಗ್ರಹದೊಂದಿಗೆ ಆಲಂಕಾರು ಪ್ರತಿಭಟನಾ ಸಭೆ ನಡೆಯಲಿದ್ದು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನುವ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.
