ಬೆಂಗಳೂರು: ಹೇಳದೆ ಕೇಳದೆ ರಜೆ ಹಾಕುವುದು ಉದ್ಯೋಗಿಯ ಹಕ್ಕಲ್ಲ, ಇಂಥಹಾ ಶ್ರದ್ಧೆ ಇಲ್ಲದ ನೌಕರನಿಗೆ ಸಹಾನುಭೂತಿ ಬೇಡ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಪೂರ್ವಾನುಮತಿ ಇಲ್ಲದೆ ಕೆಲಸಕ್ಕೆ ಗೈರಾಗುವುದು ದುರ್ನಡತೆ, ಶ್ರದ್ಧೆಯಿಂದ ಕೆಲಸ ಮಾಡದ ಉದ್ಯೋಗಿ ಇದ್ರೆ ಏನು ಉಪಯೋಗ. ಅಂತವರ ಬಗ್ಗೆ ಸಹಾನುಭೂತಿ ತೋರಿಸುವ ಅಗತ್ಯವಿಲ್ಲ ಕೋರ್ಟು ಹೇಳಿದೆ.
ಉದ್ಯೋಗಕ್ಕೆ ಅನಧಿಕೃತವಾಗಿ ಗೈರು ಹಾಜರಾದ ಹಿನ್ನೆಲೆ, ಟ್ರೈನಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ವೆಂಕಟರಾಮಯ್ಯರನ್ನು ಸೇವೆಯಿಂದ ತೆಗೆದು ಹಾಕಲಾಗಿತ್ತು. ಈ ಆದೇಶ ರದ್ದುಪಡಿಸಿದ್ದ ಕಾರ್ಮಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಬಿಎಂಟಿಸಿ ಹೈಕೋರ್ಟ್’ಗೆ ಅರ್ಜಿ ಸಲ್ಲಿಸಿದ್ದು, ನ್ಯಾಯಮೂರ್ತಿ ಎಂ. ಜ್ಯೋತಿ ಅವರ ಪೀಠ ಪೂರ್ವಾನುಮತಿ ರಜೆ ಪಡೆದುಕೊಳ್ಳದೆ ವೆಂಕಟರಾಮಯ್ಯ ಎಂಬವರು 2016ರ ಡಿ. 1ರ ನಂತರ ಅನಧಿಕೃತವಾಗಿ ಕೆಲಸಕ್ಕೆ ಗೈರು ಹಾಜರಾಗಿದ್ದಾರೆ. ಇದು ಸಾಬೀತದ ಹಿನ್ನೆಲೆಯಲ್ಲಿ ಬಿಎಂಟಿಸಿ ಸೇವೆಯಿಂದ ವಜಾ ಮಾಡಿದೆ. ಉದ್ಯೋಗ ನಿರ್ವಹಿಸುವ ವೇಳೆ ಸಕಾರಣವಿಲ್ಲದೆ ಉದ್ಯೋಗಕ್ಕೆ ನೌಕರ ಅನಧಿಕೃತವಾಗಿ ಒಪ್ಪಿಗೆ ಇಲ್ಲದೆ ಗೈರಾಗುವುದು ತಪ್ಪು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಯಾವುದೇ ಉದ್ಯೋಗಿಯ ಗೈರು ಹಾಜರಿಯನ್ನು ಹಕ್ಕು ಎಂದು ಕ್ಲೇಮು ಮಾಡಬಾರದು. ರಜೆ ಇಲ್ಲದೇ ಕೆಲಸಕ್ಕೆ ಗೈರಾಗುವುದು ಶಿಸ್ತಿನ ಉಲ್ಲಂಘನೆ, ಇಲ್ಲಿ ಅನಧಿಕೃತವಾಗಿ ಕೆಲಸಕ್ಕೆ ಗೈರಾಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ನೀಡಲಾಗಿದೆ. ದೀರ್ಘಾವಧಿ ಕೆಟ್ಟ ಸೇವೆಯ ದುರ್ನಡತೆ ಕ್ಷಮಿಸಲು ಅರ್ಹವಲ್ಲ ಎಂದು ನ್ಯಾಯಪೀಠ ಹೇಳಿದೆ.
