Home » ತಲಪಾಡಿ: ಮುಂಜಾನೆ ಅಂಗಡಿ ತೆರೆಯುತ್ತಿದ್ದ ವ್ಯಕ್ತಿಗೆ ಹಲ್ಲೆಗೈದು ದರೋಡೆ | ಮೂರುಜನ ದರೋಡೆಕೋರರಿಂದ ಕೃತ್ಯ ಗಾಯಳು ಆಸ್ಪತ್ರೆಗೆ ದಾಖಲು

ತಲಪಾಡಿ: ಮುಂಜಾನೆ ಅಂಗಡಿ ತೆರೆಯುತ್ತಿದ್ದ ವ್ಯಕ್ತಿಗೆ ಹಲ್ಲೆಗೈದು ದರೋಡೆ | ಮೂರುಜನ ದರೋಡೆಕೋರರಿಂದ ಕೃತ್ಯ ಗಾಯಳು ಆಸ್ಪತ್ರೆಗೆ ದಾಖಲು

by ಹೊಸಕನ್ನಡ
0 comments

ತಲಪಾಡಿ ಸಮೀಪ ಅಂಗಡಿ ತೆರೆಯುತ್ತಿದ್ದ ವ್ಯಕ್ತಿಯೊಬ್ಬರನ್ನು ದರೋಡೆ ನಡೆಸಿದ ಪ್ರಕರಣ ಬೆಳಕಿಗೆ ಬಂದಿದ್ದು ತಲಪಾಡಿ ಮಾಧವಪುರ ಮೇಗಿನ ಪಂಜಾಳ ಎಂಬಲ್ಲಿ ಈ ಘಟನೆ ನಡೆದಿದ್ದು ದರೋಡೆಕೋರರಿಂದ ದಾಳಿಗೊಳಗಾದ ವ್ಯಕ್ತಿಯನ್ನು ಹಸೈನಾರ್ ಖಾಸಿಂ ಎಂದು ಗುರುತಿಸಲಾಗಿದೆ.

ಘಟನೆಯ ವಿವರ :

ಮಾಧವಪುರ, ಮೇಗಿನ ಪಂಜಾಳ ನಿವಾಸಿ ಹಸೈನಾರ್ ಯಾನೆ ಖಾಸಿಂ (57) ಎಂಬವರು ಇಂದು ಮುಂಜಾನೆ ತನ್ನ ಮನೆ ಸಮೀಪದಲ್ಲೇ ಇರುವ ತನ್ನ ಅಂಗಡಿ ತೆರೆಯಲು ತೆರಳಿದ್ದ ವೇಳೆ ಹಿಂದಿನಿಂದ ಬಂದ ವ್ಯಕ್ತಿಯೊಬ್ಬ ಹಸೈನಾರ್ ಅವರ ಕುತ್ತಿಗೆಯನ್ನು ಗಟ್ಟಿಯಾಗಿ ಹಿಸುಕಿ ಅವರ ಬಳಿಯಿದ್ದ 14,700 ರೂಪಾಯಿಗಳನ್ನು ದರೋಡೆಗೈದು ಪರಾರಿಯಾಗಿದ್ದಾನೆ.

ಘಟನೆಯಿಂದ ಗಾಯಗೊಂಡು ಮೂರ್ಛೆ ಹೋಗಿದ್ದ ಹಸೈನಾರ್ ಅವರನ್ನು ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು,ಮೂರು ಜನರ ತಂಡ ದರೋಡೆ ನಡೆಸಿರಬಹುದೆಂದು ಶಂಕಿಸಲಾಗಿದೆ.

ಸ್ಥಳಕ್ಕೆ ಉಳ್ಳಾಲ ಠಾಣಾ ಪೊಲೀಸರು ಆಗಮಿಸಿ ಕೇಸು ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

You may also like

Leave a Comment