Puttur: ಸಹ್ಯಾದ್ರಿ ಫ್ರೆಂಡ್ಸ್ (ರಿ.)
ಕೈಕಾರ ಪುತ್ತೂರು ದ.ಕ. ಇದರ ಆಶ್ರಯದಲ್ಲಿ ಒಡಿಯೂರು ಶ್ರೀ ಗುರುದೇವ ಬಳಗ ಪುತ್ತೂರು ಇವರ ಸಹಕಾರದೊಂದಿಗೆ ನಡೆದ 9ನೇ ವರ್ಷದ “ನಮ್ಮ ಕೈಕಾರಡ್ ಕೆಸರ್‌ಡೊಂಜಿ ದಿನ” ಕಾರ್ಯಕ್ರಮದಲ್ಲಿ ಪುತ್ತೂರು ತಾಲೂಕು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಅಧ್ಯಕ್ಷ, ವಿಟಿವಿ ನ್ಯೂಸ್ ಚಾನೆಲ್ ನ ಆಡಳಿತ ನಿರ್ದೇಶಕರಾದ ರಾಮ್‌ದಾಸ್ ಶೆಟ್ಟಿಯವರಿಗೆ ಹಲವು ಗಣ್ಯರ ಸಮ್ಮುಖದಲ್ಲಿ “ಸಹ್ಯಾದ್ರಿ ಸಿರಿ” ಪ್ರಶಸ್ತಿ-2025″ ನೀಡಿ ಗೌರವಿಸಲಾಯಿತು.
ಸದಾ ಪರಿಸರದ ಕಾಳಜಿಯುಳ್ಳ ಮತ್ತು ರಾಜ್ಯಾದ್ಯಂತ ಜನಪರ ಕಾರ್ಯಗಳ ಮೂಲಕ ಉನ್ನತ ಮಟ್ಟದಲ್ಲಿ ಗುರುತಿಸಿಕೊಂಡು ಹೆಸರು ವಾಸಿಯಾದ ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯ ಸಂಚಾಲಕರಾಗಿ, ಪುತ್ತೂರು ತಾಲೂಕು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಅಧ್ಯಕ್ಷರಾಗಿ ಹಾಗೂ ಕರ್ನಾಟಕ ಕುಸ್ತಿ ಸಂಘದ ಮೀಡಿಯಾ ಅಕ್ರೀಡಿಯೇಷನ್ ನ ಸದಸ್ಯರಾಗಿ ಹಾಗೂ ಬೆಂಗಳೂರಿನಲ್ಲಿ ನಡೆಯುವ ಮಹಾ ಶಿವರಾತ್ರಿ ಕಾರ್ಯಕ್ರಮದ ಶ್ರೀ ಮಹಾಲಿಂಗೇಶ್ವರ ಸೇವಾ ಟ್ರಸ್ಟ್ ನ ಕಾರ್ಯಕಾರಿಣಿ ಸದಸ್ಯರಾಗಿ ಜೊತೆಗೆ ಒಂದಿಷ್ಟು ಸಮಾಜಮುಖಿ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುತ್ತಾರೆ.
ಮಾದ್ಯಮ ಮತ್ತು ಉದ್ಯಮ ಕ್ಷೇತ್ರ ಹಾಗೂ ಸಮಾಜಮುಖಿ ಕಾರ್ಯಗಳಿಗೆ ಇವರಿಗೆ ಸಹ್ಯಾದ್ರಿ ಫ್ರೆಂಡ್ಸ್ (ರಿ.) ಕೈಕಾರ ಪುತ್ತೂರು ವತಿಯಿಂದ 9 ನೇ ವರ್ಷದ ಕೆಸರ್ಡೊಂಜಿ ದಿನ ಕಾರ್ಯಕ್ರಮದಲ್ಲಿ “ಸಹ್ಯಾದ್ರಿ ಸಿರಿ” ಪ್ರಶಸ್ತಿ-2025″ ನೀಡಿ ಗೌರವಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲೆ ಮಾಜಿ ಸಂಸದ, ನಿಕಟಪೂರ್ವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು, ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ರಾಧಾಕೃಷ್ಣ ರೈ ಬೂಡಿಯಾರು, ಬಿಜೆಪಿ ಗ್ರಾಮಾಂತರ ಮಂಡಲ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಶ್ರೀಮತಿ ಗೀತಾ ಎಚ್ ಅಧ್ಯಕ್ಷರು ಗ್ರಾಮ ಪಂಚಾಯತ್ ಆರ್ಯಾಪು, ಕೆದಂಬಾಡಿ ಗ್ರಾಮ ಪಂಚಾಯತ್ ಸದಸ್ಯೆ ನಿಮಿತ ನವೀನ್ ರೈ, ಸಹ್ಯಾದ್ರಿ ಫ್ರೆಂಡ್ಸ್ (ರಿ.) ಕೈಕಾರ ಇದರ ಅಧ್ಯಕ್ಷ ನಿಖಿಲ್ ಆಚಾರ್ಯ ಕೈಕಾರ, ಗೌರವಾಧ್ಯಕ್ಷ ಪ್ರಜ್ವಲ್ ರೈ ತೋಟ್ಗಕಾರ್ಯದರ್ಶಿ ಹರೀಶ್ ಎಂ ಮಿನಿಪದವು, ಉಪಾಧ್ಯಕ್ಷ ನವೀನ್ ರೈ ಪನಡ್ಕ, ಜೊತೆ ಕಾರ್ಯದರ್ಶಿ ಸದಾಶಿವ ಆಚಾರ್ಯ ಕೈಕಾರ, ಖಜಾಂಚಿ ಅಭಿಷೇಕ ನಾಯ್ಕ ಹೊಸಲಕ್ಕೆ ಸೇರಿದಂತೆ ಸರ್ವಸದಸ್ಯರ ಸಮ್ಮುಖದಲ್ಲಿ “ಸಹ್ಯಾದ್ರಿ ಸಿರಿ” ಪ್ರಶಸ್ತಿ-2025″ ಪ್ರಶಸ್ತಿ ನೀಡಿ ಗೌರವಿಸಲಾಯಿತು.
