Heart Attack: ಪೊನ್ನಂಪೇಟೆ ತಾಲೂಕು ಪಂಚಾಯಿತಿಯ ಪ್ರಭಾರ ಯೋಜನಾಧಿಕಾರಿ ಮನಮೋಹನ್ (46) ತನ್ನ ಆಲ್ಟೋ ಕಾರಿನಲ್ಲಿ ಚಲಿಸುತ್ತಿದ್ದಾಗಲೇ ಹೃದಯಘಾತದಿಂದ ಸಾವನ್ನಪ್ಪಿದ್ದಾರೆ. ಅವರು ಇಂದು ಸಂಜೆ 4ರ ಸಮಯಕ್ಕೆ ಮಡಿಕೇರಿಯ ಪೊನ್ನಂಪೇಟೆಯ ತಿತಿಮತಿಯಿಂದ ಪಿರಿಯಾಪಟ್ಟಣಕ್ಕೆ ಒಬ್ಬರೇ ಪ್ರಯಾಣಿಸುತ್ತಿದ್ದಾಗ ಬೂದಿತಿಟ್ಟು ಬಳಿ ಈ ಘಟನೆ ಸಂಭವಿಸಿದೆ.
ಮೂಲತಃ ಬೆಂಗಳೂರಿನವಾರದ ಇವರು ತಿತಿಮಿತಿಯಲ್ಲಿ ಕುಟುಂಬ ಸಹಿತ ವಾಸವಾಗಿದ್ದರು. ಪೊನ್ನಪ್ಪ ಸಂತೆ, ನಿಟ್ಟೂರು ಬಾಳಲೆ, ಸೋಮವಾರ ಪೇಟೆ ಸಿದ್ದಾಪುರದಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ಈ ಹಿಂದೆ ಕರ್ತವ್ಯ ನಿರ್ವಹಿಸಿದ್ದರು. ಕಳೆದ ಒಂದುವರೆ ತಿಂಗಳಿನಿಂದ ಪೊನ್ನಂಪೇಟೆ ತಾಲೂಕು ಪಂಚಾಯಿತಿಯಲ್ಲಿ ಶ್ರೀಯುತರು ಕರ್ತವ್ಯ ನಿರ್ವಹಿಸುತ್ತಿದ್ದರು.
ಇದನ್ನೂ ಓದಿ:TRAI: CNAP ಎಂದರೇನು? ನಕಲಿ ಕರೆಗಳನ್ನು ಸಂಪೂರ್ಣವಾಗಿ ನಿಲ್ಲಿಸುವ CNAP ಸೇವೆ ಯಾವುದು?
ಇಂದು ಪಿರಿಯಾಪಟ್ಟಣಕ್ಕೆ ತೆರಳುತ್ತಿದ್ದ ಸಂದರ್ಭ ದಿಡಿರಾಗಿ ಕಾರಿನಲ್ಲಿ ಕುಸಿದು ಸಾವನಪ್ಪಿದ್ದಾರೆ. ಮೃತರ ನಿಧನಕ್ಕೆ ಪೊನ್ನಂಪೇಟೆ ತಾಲೂಕು ಪಂಚಾಯಿತಿಯ ಕಾರ್ಯನಿರ್ವಣಾಧಿಕಾರಿಗಳು ಹಾಗೂ ಸಿಬ್ಬಂದಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
