Home » Tamannaah Bhatia: ತಮನ್ನ-ವಿಜಯ್‌ ವರ್ಮಾ ಬ್ರೇಕಪ್‌; 2 ವರ್ಷದ ಡೇಟಿಂಗ್‌ ಅಂತ್ಯ

Tamannaah Bhatia: ತಮನ್ನ-ವಿಜಯ್‌ ವರ್ಮಾ ಬ್ರೇಕಪ್‌; 2 ವರ್ಷದ ಡೇಟಿಂಗ್‌ ಅಂತ್ಯ

0 comments

Tamannaah Bhatia: ಮಿಲ್ಕ್‌ ಬ್ಯೂಟಿ ನಟಿ ತಮನ್ನಾ ಭಾಟಿಯಾ ಮತ್ತು ನಟ ವಿಜಯ್‌ ವರ್ಮಾ ಸಂಬಂಧದಲ್ಲಿ ಬಿರುಕು ಮೂಡಿದ್ದು, ಇಬ್ಬರೂ ಬ್ರೇಕಪ್‌ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಇವರಿಬ್ಬರು ಶೀಘ್ರವೇ ಮದುವೆಯಾಗಲಿದ್ದಾರೆ ಎಂಬ ಸುದ್ದಿಗಳು ಕೇಳಿ ಬರುತ್ತಿದ್ದ ಸಮಯದಲ್ಲೇ ಇದೀಗ ಇವರಿಬ್ಬರೂ ಬೇರೆಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಕೆಲ ವಾರದ ಹಿಂದೆ ಇವರ ಸಂಬಂಧ ಮುರಿದು ಬಿದ್ದಿದ್ದು, ಇಬ್ಬರೂ ಸಂಬಂಧವನ್ನು ಕೊನೆಗೊಳಿಸಿದ್ದರೂ ತಮನ್ನಾ ಭಾಟಿಯಾ ಮತ್ತು ವಿಜಯ್‌ ವರ್ಮಾ ಪರಸ್ಪರ ಗೌರವ ಹೊಂದಿದ್ದಾರೆ. ಇಬ್ಬರೂ ಸ್ನೇಹಿತರಾಗಿ ಉಳಿಯಲು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.

ಲಸ್ಟ್‌ ಸ್ಟೋರಿಸ್‌ 2 ರಲ್ಲಿ ಜೊತೆಯಾಗಿ ನಟಿಸಿದ ಇವರಿಬ್ಬರ ಮಧ್ಯೆ ಹಸಿ ಬಿಸಿ ದೃಶ್ಯವಿದ್ದು, ಇದು ಬಿಡುಗಡೆಯಾದಾಗ ಇವರಿಬ್ಬರ ಮಧ್ಯೆ ಸಂಬಂಧವಿದೆ ಎಂದು ಬಹಿರಂಗಗೊಂಡಿತ್ತು. ಇದರ ಮುಂದುವರಿದ ಭಾಗವಾಗಿ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಇಬ್ಬರೂ ತಬ್ಬಿಕೊಂಡು ಮುತ್ತಿಡುವ ದೃಶ್ಯದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.

You may also like