Home » Tamarind Tree: ಹುಣಸೆ ಮರದ ಮೂಲ ಭಾರತವಲ್ಲ ಎಂಬುದು ನಿಮಗೆ ಗೊತ್ತೇ? ಹಾಗಿದ್ರೆ ಯಾವ ದೇಶದ್ದು? ಇಲ್ಲಿಗೆ ಬಂದದ್ದು ಹೇಗೆ?

Tamarind Tree: ಹುಣಸೆ ಮರದ ಮೂಲ ಭಾರತವಲ್ಲ ಎಂಬುದು ನಿಮಗೆ ಗೊತ್ತೇ? ಹಾಗಿದ್ರೆ ಯಾವ ದೇಶದ್ದು? ಇಲ್ಲಿಗೆ ಬಂದದ್ದು ಹೇಗೆ?

0 comments

Tamarind Tree: ಭಾರತದಲ್ಲಿ ಹುಣಸೆ ಹಣ್ಣಿಗೆ ಹಾಗೂ ಅದರ ಹುಳಿಗೆ ತನ್ನದೇ ಆದ ಮಹತ್ವವಿದೆ.ಹೆಚ್ಚಿನ ಆಹಾರ ಪದಾರ್ಥಕ್ಕೆ ಹುಣಸೆ ಹುಳಿಯನ್ನು ಹಾಕದಿದ್ದರೆ ಅದು ರುಚಿಸುವುದಿಲ್ಲ. ಹುಳಿ ಮಾತ್ರವಲ್ಲ ಅದರ ಕಾಯಿ, ಹಣ್ಣು, ತೊಗಟೆ, ಮರದಿಂದಲೂ ಕೂಡ ನಾನಾ ರೀತಿಯ ಉಪಯೋಗಗಳಿವೆ. ಹುಣಸೆ ಮರಗಳಂತೂ ಎಲ್ಲೆಂದರಲ್ಲಿ ಕಂಡುಬರುತ್ತವೆ. ಕಾಡು, ನಾಡು, ಹಳ್ಳಿ ಡೆಲ್ಲಿಯಲ್ಲಿಯೂ ಕೂಡ ಇವುಗಳು ಎಲ್ಲೆಂದರಲ್ಲಿ ಬೆಳೆಯುತ್ತದೆ. ಆದರೆ ಹುಣಸೆ ಮರದ ಮೂಲ ಭಾರತವಲ್ಲವೆಂಬುದು ನಿಮಗೆ ಗೊತ್ತೇ? ಹಾಗಿದ್ರೆ ಇದು ಯಾವ ದೇಶದ್ದು ಇಲ್ಲಿಗೆ ಬಂದದ್ದು ಹೇಗೆ?

ಹುಣಸೆ ಹಣ್ಣು ಭಾರತೀಯ ನೆಲದಲ್ಲಿ ಬೆಳೆದಿದ್ದು ಎಂದು ಹೇಳಿದರೂ, ಇದು ಆಫ್ರಿಕಾಗೆ ಸೇರಿದ್ದು ಎಂದು ಸಂಶೋಧಕರು ಹೇಳುತ್ತಾರೆ. ಈ ಹೆಸರು ವೊಲೊಫ್ ಭಾಷೆ ಡಖರ್ ಪದದಿಂದ ಬಂದಿದೆ. ವೊಲೊಫ್ (Wolof language) ಭಾಷೆಯಲ್ಲಿ ಡಖರ್ ಎಂದರೆ ಹುಣಸೆ ಹಣ್ಣು ಎಂಬ ಅರ್ಥ ನೀಡುತ್ತದೆ ಇಂದು ಸಂಶೋಧಕರು ಕಂಡು ಹಿಡಿದಿದ್ದಾರೆ. ಅರಬ್ ವ್ಯಾಪಾರಿಗಳು ಹುಣಸೆ ಹಣ್ಣನ್ನು ಖರ್ಜೂರವೆಂದು ಭಾವಿಸಿ ಭಾರತೀಯ ಖರ್ಜೂರ ಎಂದು ಕರೆದರು. ತಮರ್-ಅಲ್-ಹಿಂದ್, ಅಕಾ ತಮರ್-ಇ-ಹಿಂದ್ ಎಂತಲೂ ಹುಣಸೆಗೆ ಹೆಸರಿಟ್ಟು, ಪ್ರಪಂಚದ ನಾನಾ ಭಾಗಗಳಿಗೆ ಕೊಂಡೊಯ್ದರು ಎಂದು ಹೇಳಲಾಗುತ್ತದೆ.

ಭಾರತಕ್ಕೆ ಹುಣಸೆ ಹಣ್ಣನ್ನು ಯಾರು ತಂದರು ಎಂಬುದರ ಹೊರತಾಗಿ, ದೇಶದ ಪಾಕ ಪದ್ಧತಿಯಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿದೆ. ಅಷ್ಟೇ ಅಲ್ಲದೆ ಹುಣಸೆಯು ಆಗ್ನೇಯ ಏಷ್ಯಾದ ಪಾಕ ಪದ್ಧತಿಯಲ್ಲೂ ಸ್ಥಾನ ಪಡೆದಿದೆ.

ಇದರ ಹೊರತಾಗಿ ಹುಣಸೆ ಮರವು ಸಾವಿರಾರು ವರ್ಷಗಳ ಹಿಂದೆ ನೈಸರ್ಗಿಕವಾಗಿ ಬೆಳೆದ ಮರ ಎಂದು ಭಾರತೀಯ ಪ್ರಾಚೀನ ಗ್ರಂಥವಾದ ‘ಬ್ರಹ್ಮ ಸಂಹಿತ’ ಯಲ್ಲಿ ಹೇಳಲಾಗಿದೆ. ಬೆಚ್ಚಗಿನ ಹವಾಮಾನದ ಹಣ್ಣುಗಳು’ ಎಂಬ ಪುಸ್ತಕ ಬರೆದಿರುವ ಸಸ್ಯಶಾಸ್ತ್ರಜ್ಞೆ ಜೂಲಿಯಾ ಎಫ್ ಮಾರ್ಟನ್ ಅವರು ಹೇಳುವಂತೆ ‘ಬಹಳ ಹಿಂದೆಯೇ ಭಾರತದಲ್ಲಿ ಹುಣಸೆ ಮರವು ಚಿರಪರಿಚಿತವಾಗಿತ್ತು.’ ಎಂದು ಉಲ್ಲೇಖಿಸಿದ್ದಾರೆ.

You may also like