Home » Tamilunadu: ಅಣ್ಣಾಮಲೈಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ?!

Tamilunadu: ಅಣ್ಣಾಮಲೈಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ?!

0 comments
Annamalai

Tamilunadu : ಲೋಕಸಭಾ ಚುನಾವಣೆಯ ಬಳಿಕ ಅಣ್ಣಾಮಲೈ ಅವರು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈಗ ಈ ಬೆನ್ನಲ್ಲೇ ಮತ್ತೆ ಅಣ್ಣಾಮಲೈ ವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟವನ್ನು ಕಟ್ಟಲು ತಯಾರಿ ನಡೆಸುತ್ತಿದೆ ಎಂಬ ಸುದ್ದಿ ಕೇಳಿ ಬಂದಿದೆ.

ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು ಬಿಜೆಪಿ ಹೈಕಮಾಂಡ್ ಪ್ರಮುಖ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಅಣ್ಣಾಮಲೈ ಅವರ ಸ್ಥಾನಕ್ಕೆ ನೈನಾರ್ ನಾಗೇಂದ್ರನ್ ಅವರನ್ನು ನೇಮಕ ಮಾಡಲಾಗಿತ್ತು. ಈ ಬದಲಾವಣೆಗಳ ನಂತರ ತಮಿಳುನಾಡು ಬಿಜೆಪಿಯಲ್ಲಿ ಗೊಂದಲಗಳು ಉಂಟಾಗಿತ್ತು.

ಪಕ್ಷ ಪ್ರಸ್ತುತ ನೈನಾರ್ ನಾಗೇಂದ್ರನ್ ಅವರ ನಾಯಕತ್ವದಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ, ಮಾಜಿ ರಾಜ್ಯ ಅಧ್ಯಕ್ಷ ಅಣ್ಣಾಮಲೈ ಅವರು ಮತ್ತೆ ರಾಜ್ಯಾಧ್ಯಕ್ಷರ ಹುದ್ದೆಗೆ ಮರಳಬಹುದು ಎಂಬ ಸುದ್ದಿಗಳಿವೆ. ನೈನಾರ್ ಪಕ್ಷದ ವ್ಯವಹಾರಗಳನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿನ ಎಲ್ಲಾ ಪ್ರಸ್ತುತ ಸುದ್ದಿಗಳನ್ನು ಅಣ್ಣಾಮಲೈ ಅವರ ಅಭಿಮಾನಿಗಳು ಹರಡುತ್ತಿದ್ದಾರೆ ಎಂದು ನೈನಾರ್ ಬೆಂಬಲಿಗರು ಹೇಳಿದ್ದಾರೆ.

You may also like