Home » Varthur Santhosh: ತನಿಷಾ ಕುಪ್ಪಂಡ ನನ್ನ ಅಕ್ಕ: ವರ್ತೂರು ಸಂತೋಷ್‌

Varthur Santhosh: ತನಿಷಾ ಕುಪ್ಪಂಡ ನನ್ನ ಅಕ್ಕ: ವರ್ತೂರು ಸಂತೋಷ್‌

0 comments

Varthur Santhosh: ಹಳ್ಳಿಕಾರ್‌ ವರ್ತೂರು ಸಂತೋಷ್‌ ಅವರು ತನ್ನ ಹಾಗೂ ನಟಿ ತನಿಷಾ ಕುಪ್ಪಂಡ ಕುರಿತು ಕೇಳಿ ಬರುತ್ತಿರುವ ಅನೇಕ ಉಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ನಟಿ ತನಿಷಾ ಕುಪ್ಪಂಡ, ವರ್ತೂರು ಸಂತೋಷ್‌ ಅವರು ಕನ್ನಡ ಬಿಗ್‌ಬಾಸ್‌ ಸೀಸನ್‌ -10 ರ ಸ್ಪರ್ಧಿಗಳು. ಅಲ್ಲಿ ಇವರಿಬ್ಬರ ಸ್ನೇಹ ಬಹಳ ಜನಪ್ರಿಯವಾಗಿತ್ತು. ಬೆಂಕಿ ಎಂದು ಕರೆಯುತ್ತಾ ವರ್ತೂರು ಅವರು ತನಿಷಾ ಜೊತೆ ಸ್ನೇಹದಿಂದ ಇದ್ದರು.

ಬಿಗ್‌ಬಾಸ್‌ ಮನೆಯಿಂದ ಹೊರ ಬಂದ ನಂತರವೂ ಅವರಿಬ್ಬರ ಸ್ನೇಹ ಹಾಗೇ ಉಳಿದಿತ್ತು. ಆದರೆ ಇವರಿಬ್ಬರ ಸಂಬಂಧ ಸ್ನೇಹಕ್ಕಿಂತ ಮೇಲೆ ಬೇರೆ ಏನೋ ಇದೆ ಎನ್ನುವ ರೀತಿಯಲ್ಲಿ ಕಮೆಂಟ್‌ಗಳು ಬರುತ್ತಿತ್ತು. ಇದೀಗ ಈ ಎಲ್ಲಾ ಉಹಾಪೋಹಗಳಿಗೆ ವರ್ತೂರು ತೆರೆ ಎಳೆದಿದ್ದು, ತನಿಷಾ ಕುಪ್ಪಂಡ ನನಗೆ ಬಿಗ್‌ಬಾಸ್‌ ಸಹ ಸ್ಪರ್ಧಿ. ಅವರು ನನ್ನ ಅಕ್ಕನ ಸ್ಥಾನದಲ್ಲಿದ್ದಾರೆ. ಇವರು ನಾನು ಇದನ್ನು ಹೇಳ್ತಾ ಇದ್ದೇನೆ. ನನಗೆ ಎಲ್ಲ ವದಂತಿಗಳನ್ನು ಕೇಳಿ ಕೇಳಿ ಸಾಕಾಗಿದೆ. ಅವರಿಗೂ ಇದು ಮುಜುಗರ ಆಗಿದೆ. ನಾನು ಅವರನ್ನು ಬಿಗ್‌ಬಾಸ್‌ನಲ್ಲಿಯೇ ಅಕ್ಕ ಎಂದು ಕರೆದಿದ್ದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:Mangaluru: KSRTC ದಸರಾ ವಿಶೇಷ ಪ್ಯಾಕೇಜ್‌ ಅ.7 ರವರೆಗೆ ವಿಸ್ತರಣೆ

ತನಿಷಾ ಬ್ಯುಸಿನೆಸ್‌ ಹಾಗೂ ವ್ಯವಹಾರದಲ್ಲಿ ನನ್ನ ಪಾಲುದಾರಿಕೆ ಇಲ್ಲ. ನನಗೆ ಅವತ್ತೂ ಅವರ ಮೇಲೆ ಗೌರವ ಇತ್ತು, ಇಂದೂ ಇದೆ ಎಂದು ಹೇಳಿದ್ದಾರೆ.

You may also like