Home » Tarikere News: ಅಜ್ಜ ನಿದ್ರೆಗೆ ಜಾರಿದಾಗ ಬಸ್‌ನಿಂದ ಇಳಿದ ಮೂರು ವರ್ಷದ ಮಗು! ಪತ್ತೆಯಾಗಿದ್ದು ಹೇಗೆ ಗೊತ್ತೇ?

Tarikere News: ಅಜ್ಜ ನಿದ್ರೆಗೆ ಜಾರಿದಾಗ ಬಸ್‌ನಿಂದ ಇಳಿದ ಮೂರು ವರ್ಷದ ಮಗು! ಪತ್ತೆಯಾಗಿದ್ದು ಹೇಗೆ ಗೊತ್ತೇ?

by Mallika
1 comment
Tarikere News

Tarikere News: ಬಸ್‌ ನಿಂದ ಇಳಿದು ತಪ್ಪಿಸಿಕೊಂಡಿದ್ದ ಮೂರು ವರ್ಷದ ಮಗುವೊಂದು ಪೋಷಕರ ಮಡಿಸಲು ಸೇರಿದ ಘಟನೆಯೊಂದು ತರೀಕೆರೆ ತಾಲೂಕಿನ ತಣಿಗೇಬೈಲು ಗ್ರಾಮದಲ್ಲಿ ನಡೆದಿದೆ. ತನ್ನ ಅಜ್ಜನೊಂದಿಗೆ ಮೂರು ವರ್ಷದ ಮೊಮ್ಮಗ ಶ್ರೇಯಸ್‌ ತರೀಕೆರೆಗೆ ಹೊರಟಿದ್ದ. ಖಾಸಗಿ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ಇವರಿಬ್ಬರು, ಈ ಸಂದರ್ಭದಲ್ಲಿ ಅಜ್ಜ ನಿದ್ರೆಗೆ ಜಾರಿದ್ದಾರೆ. ಖಾಸಗಿ ಬಸ್‌ ಲಿಂಗದಹಳ್ಳಿ ನಿಲ್ದಾಣದ ಬಳಿ ಬಸ್‌ ನಿಂತಿದೆ. ಈ ಸಮಯದಲ್ಲಿ ಮಗು ಶ್ರೇಯಸ್‌ ಕೆಳಗೆ ಇಳಿದಿದ್ದಾನೆ. ನಂತರ ಇನ್ನೊಂದು ತರೀಕೆರೆ ಬಸ್‌ ಹತ್ತಿದ್ದಾನೆ.

ಬಸ್‌ ಹೊರಟಿದೆ. ಮಗು ಈ ಸಂದರ್ಭದಲ್ಲಿ ಅಜ್ಜನನ್ನು ಕಾಣದೆ ಅಳುತ್ತಾನೆ. ಆಗ ಪ್ರಯಾಣಿಕರು ವಿಚಾರಿಸಿ, ನಂತರ ಠಾಣೆಗೆ ಕರೆದೊಯ್ಯುತ್ತಾರೆ. ಸಾರ್ವಜನಿಕರು ಬಾಲಕನ ಭಾವಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಾರೆ. ನಂತರ ಇದು ಪೋಷಕರ ಗಮನಕ್ಕೆ ಬರುತ್ತದೆ. ಕೂಡಲೇ ಪೋಷಕರು ಪೊಲೀಸ್‌ ಠಾಣೆಗೆ ಬಂದು ಮಗುವನ್ನು ಕರೆದುಕೊಂಡು ಹೋಗುತ್ತಾರೆ.

ಇದನ್ನು ಓದಿ: Train: ಅಷ್ಟು ನೈಸ್ ಇದ್ರೂ ಹಳಿಗಳ ಮೇಲೆ ರೈಲಿನ ಚಕ್ರ ಜಾರಲ್ಲ ಯಾಕೆ ?! ರಿವೀಲ್ ಆಯ್ತು ಯಾರೂ ತಿಳಿಯದ ಹೊಸ ಸತ್ಯ

You may also like

Leave a Comment