Home » Tata Nano: ಬೈಕಿನಲ್ಲಿದ್ದಾಗ ಟ್ರಾಫಿಕ್ ನಲ್ಲಿ ಮಳೆಗೆ ಸಿಲುಕಿದ ಕುಟುಂಬ – ಮರುಗಿದ ರತನ್ ಟಾಟಾರಿಂದ ತಯಾರಾಯ್ತು ಕೇವಲ 1 ಲಕ್ಷ ಟಾಟಾ ನ್ಯಾನೋ ಕಾರು !

Tata Nano: ಬೈಕಿನಲ್ಲಿದ್ದಾಗ ಟ್ರಾಫಿಕ್ ನಲ್ಲಿ ಮಳೆಗೆ ಸಿಲುಕಿದ ಕುಟುಂಬ – ಮರುಗಿದ ರತನ್ ಟಾಟಾರಿಂದ ತಯಾರಾಯ್ತು ಕೇವಲ 1 ಲಕ್ಷ ಟಾಟಾ ನ್ಯಾನೋ ಕಾರು !

0 comments

Tata Nano: ಭಾರತದ ಆಟೋ ಉದ್ಯಮಕ್ಕೆ ಹಲವಾರು ಜನಪ್ರಿಯ ಉತ್ಪನ್ನಗಳನ್ನು ನೀಡಿದವರು. ಅವರು ನೀಡಿದ ಟಾಟಾ ಇಂಡಿಕಾ ಬರೋಬ್ಬರಿ 20 ವರ್ಷಗಳ ಕಾಲ ಕಾರು ಮಾರುಕಟ್ಟೆಯಲ್ಲಿ ಪಾರುಪತ್ಯ ಸಾಧಿಸಿತ್ತು. ಕಡಿಮೆ ಬೆಳೆ ಉತ್ತಮ ಮೈಲೇಜ್ ಒಳ್ಳೆಯ ಕಸ್ಟಮರ್ ಕೇರ್ ಸರ್ವಿಸ್ ಗಾಗಿ ಟಾಟಾ ಇಂಡಿಕಾ ಕಾರಿಗೆ ಜನ ಮುಗಿಬಿದ್ದಿದ್ದರು. ಟಾಟಾ ಇಂಡಿಕಾದ ಜನಪ್ರಿಯತೆ ಎಷ್ಟರಮಟ್ಟಿಗೆ ಇತ್ತೆಂದರೆ, ಅದು ಒಂದು ಜನಸಾಮಾನ್ಯರ ಮಧ್ಯಮ ವರ್ಗದವರ ಪ್ರತಿಷ್ಠೆಯ ಭಾಗವಾಗಿತ್ತು. ಅಲ್ಲದೆ ಟಾಟಾ ಇಂಡಿಕಾ ದೇಶದಾದ್ಯಂತ ಜನಪ್ರಿಯ ಕ್ಯಾಬ್ ಆಗಿ ಸ್ಥಾನ ಪಡೆಯಿತು.

ರತನ್ ಟಾಟಾ ನೇತೃತ್ವದಲ್ಲಿ ಬಂದ ಆಟೋ ಪ್ರೊಡಕ್ಟ್ಗಳಲ್ಲಿ ಇನ್ನೊಂದು ಟಾಟಾ ನ್ಯಾನೋ. ಟಾಟಾ ನ್ಯಾನೋ ಜಗತ್ತಿನ ಅತ್ಯಂತ ಕಡಿಮೆ ಬೆಲೆಯ ಕಾರು. ಟ್ಯಾಟೋ ನ್ಯಾನೋ ಎಂಬ ಪುಟಾಣಿ ಐಡಿಯಾ ರತನ್ ಟಾಟಾ ಅವರ ಮನದಲ್ಲಿ ಮೂಡಿದ್ದೆ ಒಂದು ವಿಶೇಷ ಘಟನೆ. ಅಂದು ಪತ್ನಿ ಮಕ್ಕಳೊಂದಿಗೆ ವ್ಯಕ್ತಿ ಒಬ್ಬ ದ್ವಿಜಕ್ರ ವಾಹನದಲ್ಲಿ ಸಾಗುತ್ತಿದ್ದರು. ಆ ಸಂದರ್ಭದಲ್ಲಿ ಸಿಟಿಯ ಮಧ್ಯೆ ಸಾಕಷ್ಟು ಟ್ರಾಫಿಕ್ ಇತ್ತು. ದುರದೃಷ್ಟವಶಾತ್ ಅದೇ ಸಮಯಕ್ಕೆ ಜೋರಾಗಿ ಮಳೆ ಬಂದಿದ್ದು ಇಡೀ ಕುಟುಂಬ ಮಳೆಯಲ್ಲಿ ಒದ್ದೆಯಾಗಿತ್ತು. ರತನ್ ಟಾಟಾ ಅವರು ಆ ಸಂದರ್ಭದಲ್ಲಿ ಅಲ್ಲಿದ್ದು ಕಾರಿನಲ್ಲಿ ಯಾವುದೋ ಕಾರ್ಯನಿಮಿತ್ತ ಪ್ರಯಾಣಿಸುತ್ತಿದ್ದರು. ಆಗಬಹುದಿತ್ತು ನ್ಯಾನೋ ಎಂಬ ಐಡಿಯಾ.

ಯಾಕೆ ತಾವು ಬಡ ಮಧ್ಯಮ ವರ್ಗದ ಜನರಿಗಾಗಿ ಹೆಚ್ಚು ಕಮ್ಮಿ ದ್ವಿಚಕ್ರ ವಾಹನಗಳ ಆಸುಪಾಸಿನ ಬೆಲೆಯಲ್ಲಿ ಒಂದು ಕಾರನ್ನು ತಯಾರು ಮಾಡಬಾರದು ಎನ್ನುವ ಯೋಚನೆ ಅವರ ತಲೆಯಲ್ಲಿ ಬಂತು. ಕೂಡಲೇ ಕಾರ್ಯಪ್ರವೃತ್ತರಾದ ಅವರು ತಮ್ಮ ಆಪ್ತ ಇಂಜಿನಿಯರ್ ಗಳನ್ನು ಕರೆದು ತಮ್ಮ ಪ್ಲಾನ್ ಅನ್ನು ವಿವರಿಸಿದರು. ಮತ್ತು ತಕ್ಷಣ ಕಾರ್ಯಪ್ರವೃತ್ತರಾದರು. ಆದರೆ ಏನೇ ಮಾಡಿದರೂ ಒಂದು ಲಕ್ಷಕ್ಕೆ ಯಾವುದೇ ಕಾರಣಕ್ಕೂ ಬಜೆಟ್ ಕುಳಿತುಕೊಳ್ಳುತ್ತಿರಲಿಲ್ಲ. ಆದರೂ ಛಲ ಬಿಡದೆ ಮಧ್ಯಮ ವರ್ಗದ ಕುಟುಂಬಗಳು ಕೂಡ ದ್ವಿಚಕ್ರವಾಹನದ ಬೆಲೆಯಲ್ಲಿ ಕಾರುಕೊಳ್ಳುವಂತಾಗಬೇಕು ಎನ್ನುವ ಉದ್ದೇಶದಿಂದ ಯೋಜನೆಯ ರೂಪಿಸಿದರು. ನಿರಂತರ ಪ್ರಯತ್ನ ಮತ್ತು ಕಾಸ್ಟ್ ಕಟಿಂಗ್ ಯೋಜನೆಗಳ ಮೂಲಕ ನ್ಯಾನೋ ಟಾಟಾ ತಯಾರಾಗಿಯೇ ಬಿಟ್ಟಿತು.

2008ರಲ್ಲಿ ಅತ್ತ ನನ್ನ ಇಪ್ಪತ್ತು ವರ್ಷಗಳ ಆಡಳಿತದ ನಂತರ ಟಾಟಾ ಇಂಡಿಕಾ ಲೇಪತ್ಯಕ್ಕೆ ಸರಿಯುತ್ತಿದ್ದಂತೆ ಹೊಸ ಉತ್ಪನ್ನ ಟಾಟಾ ನ್ಯಾನೋ ಬಿಡುಗಡೆಯಾಯಿತು, ಜೊತೆಗೆ ಅದು ವ್ಯಾಪಕ ಪ್ರಚಾರವನ್ನು ಪಡೆದುಕೊಂಡಿತು.

ಟಾಟಾ ನ್ಯಾನೋ ಎಂಬ 1 ಲಕ್ಷದ ಕಾರು
ಬಹುಶಃ 2008 ರಲ್ಲಿ ಬಿಡುಗಡೆಯಾದ ಟಾಟಾ ನ್ಯಾನೋಗಿಂತ ರತನ್ ಟಾಟಾ ಅವರ ಭಾರತದ ಬದ್ಧತೆಯನ್ನು ಸೂಚಿಸುವ ಯಾವುದೇ ಯೋಜನೆ ಮತ್ತೊಂದು ಸುಲಭವಾಗಿ ಸಿಗಲಿಕ್ಕಿಲ್ಲ.
ಭಾರತೀಯ ಮಧ್ಯಮ ವರ್ಗದವರಿಗೆ ಕೈಗೆಟುಕುವ 1 ಲಕ್ಷ ರೂಪಾಯಿ ಬೆಲೆಯ ವಿಶ್ವದ ಅತ್ಯಂತ ಅಗ್ಗದ ಕಾರನ್ನು ರಚಿಸುವುದು ಅವರ ಉದ್ದೇಶವಾಗಿತ್ತು. ಒಂದು ಲಕ್ಷದ, ವಿಶ್ವದ ಕಾರನ್ನು ವಿಶ್ವಕ್ಕೆ ಪರಿಚಯಿಸಿದರು ರತನ್ ಟಾಟಾ. ಟಾಟಾ ನ್ಯಾನೋ ಕೇವಲ ಕಾರೆಲ್ಲ ಅದು ಬಡವರ ಬಗೆಗೆ ಇದ್ದ ಅವರ ಹಲವು ಕಾಳಜಿಗಳಲ್ಲಿ ಒಂದು ಎನ್ನಲಾಗುತ್ತಿದೆ. ಸಮಾಜದ ಕಷ್ಟಕ್ಕೆ ಸ್ಪಂದಿಸುವುದು ಅವರ ತಾತ ಟಾಟಾ ಸಮೂಹ ಸಂಸ್ಥೆಗಳ ಸ್ಥಾಪಕ ಜಂಶೆಡ್ ಜಿ ಟಾಟಾ ಅವರ ಕಾಲದಿಂದಲೂ ನಡೆದುಕೊಂಡು ಬಂದಿದೆ. ಮುಂದೆಯೂ ಅದು ಸಾಂಗವಾಗಿ ಸಾಗಲಿದೆ ಅನ್ನೋದು ಟಾಟಾ ಕುಟುಂಬ ಈತನಕ ಹಲವು ಸಂದರ್ಭಗಳಲ್ಲಿ ನಡೆದುಕೊಂಡ ರೀತಿಯನ್ನು ಹತ್ತಿರದಿಂದ ಬಲ್ಲವರ ಮಾತು.

You may also like

Leave a Comment