Home » Donald Trump : ಮಸ್ಸಿಗೆ ಬಂದಂತೆ ಟ್ಯಾಕ್ಸ್ ಹಾಕಿ ಈಗ ಮೋದಿ ನನ್ನ ಫ್ರೆಂಡ್ ಎಂದ ಟ್ರಂಪ್ – ಪ್ರಧಾನಿ ಪ್ರತಿಕ್ರಿಯೆ ಏನು?

Donald Trump : ಮಸ್ಸಿಗೆ ಬಂದಂತೆ ಟ್ಯಾಕ್ಸ್ ಹಾಕಿ ಈಗ ಮೋದಿ ನನ್ನ ಫ್ರೆಂಡ್ ಎಂದ ಟ್ರಂಪ್ – ಪ್ರಧಾನಿ ಪ್ರತಿಕ್ರಿಯೆ ಏನು?

0 comments

Donald Trump : ಭಾರತದ ಮೇಲೆ ಮನಸ್ಸಿಗೆ ಬಂದಂತೆ ಸುಮಾರು 50 ಪರ್ಸೆಂಟ್ ಅಷ್ಟು ಟ್ಯಾಕ್ಸ್ ಹಾಕಿರುವ ಅಮೆರಿಕದ ಡೊನಾಲ್ಡ್ ಟ್ರಂಪ್ ಇದೀಗ ಮೋದಿ ನನ್ನ ಬೆಸ್ಟ್ ಫ್ರೆಂಡ್ ಎಂದು ಹೇಳಿಕೆ ನೀಡಿದ್ದಾರೆ. ಇದಕ್ಕೆ ಮೋದಿಯೂ ಪ್ರತಿಕ್ರಿಯೆ ನೀಡಿದ್ದಾರೆ

ಹೌದು ಮಾಧ್ಯಮಗಳೊಂದಿಗೆ ಮಾತನಾಡುವಾಗ ಡೊನಾಲ್ಡ್ ಟ್ರಂಪ್ ಅವರು ಮೋದಿ ನನ್ನ ಬೆಸ್ಟ್ ಫ್ರೆಂಡ್. ಅವರು ಗ್ರೇಟ್ ಲೀಡರ್. ಆದರೆ ಈಗ ಅವರು ಮಾಡುತ್ತಿರುವ ಕೆಲಸಗಳು ನನಗೆ ಇಷ್ಟವಾಗುತ್ತಿಲ್ಲ. ಆದರೆ ಭಾರತ ಮತ್ತು ಅಮೆರಿಕಾ ನಡುವೆ ಯಾವತ್ತೂ ವಿಶೇಷ ಬಾಂಧವ್ಯವಿದೆ. ಆ ಸಂಬಂಧಕ್ಕೆ ಯಾವತ್ತೂ ಧಕ್ಕೆಯಾಗಲ್ಲ ಎಂದಿದ್ದಾರೆ. ಟ್ರಂಪ್ ಮಾತಿಗೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ ನಾವೂ ಸ್ನೇಹ ಸಂಬಂಧಕ್ಕೆ ಬದ್ಧರಾಗಿದ್ದೇವೆ ಎಂದಿದ್ದಾರೆ.

ಇದನ್ನೂ ಓದಿ:Ration Card: ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಮತ್ತೆ ಆರಂಭ- ಇಲ್ಲಿದೆ ಬೇಕಾಗುವ ದಾಖಲೆಗಳು, ಅರ್ಜಿ ಸಲ್ಲಿಸೋ ವಿವರ

ಡೊನಾಲ್ಡ್ ಟ್ರಂಪ್ ಹೇಳಿಕೆ ಬೆನ್ನಲ್ಲೇ ಮೋದಿ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಬರೆದುಕೊಂಡ ಮೋದಿ ‘ಡೊನಾಲ್ಡ್ ಟ್ರಂಪ್ ಅವರ ಭಾವನೆಗಳನ್ನು ಮತ್ತು ನಮ್ಮ ಸಂಬಂಧಗಳ ಬಗ್ಗೆ ಅವರು ಸಕಾರಾತ್ಮಕ ಮೌಲ್ಯಮಾಪ ಮಾಡಿದ್ದಾಗಿ ನಾನು ಹೃತ್ಪೂರ್ವಕವಾಗಿ ಶ್ಲಾಘಿಸುತ್ತೇನೆ’ ಎಂದು ಮೋದಿ ಬರೆದುಕೊಂಡಿದ್ದಾರೆ.

You may also like