Home » Affair: 17 ವರ್ಷದ ವಿದ್ಯಾರ್ಥಿ ಜೊತೆ ಟೀಚರ್’ನ ಲವ್ವಿ ಡವ್ವಿ – ಶಾಲೆಯಲ್ಲಿ ನಡೆದು ಹೋಯಿತು ದುರ್ಘಟನೆ

Affair: 17 ವರ್ಷದ ವಿದ್ಯಾರ್ಥಿ ಜೊತೆ ಟೀಚರ್’ನ ಲವ್ವಿ ಡವ್ವಿ – ಶಾಲೆಯಲ್ಲಿ ನಡೆದು ಹೋಯಿತು ದುರ್ಘಟನೆ

0 comments

Affair: ಕ್ಯಾಲಿಫೋರ್ನಿಯಾದ ಪ್ರೌಢಶಾಲೆಯೊಂದರಲ್ಲಿ 17 ವರ್ಷದ ವಿದ್ಯಾರ್ಥಿಯೊಂದಿಗೆ ಶಿಕ್ಷಕಿ ಲೈಂಗಿಕ ಸಂಬಂಧ ಹೊಂದಿದ್ದಾಗಿ ಆರೋಪಿಸಲಾಗಿದ್ದು ಶಿಕ್ಷಕಿಯನ್ನು ಅರೆಸ್ಟ್ ಮಾಡಲಾಗಿದೆ.

ಹೌದು, 2016 ರಿಂದ ರಿವರ್‌ಬ್ಯಾಂಕ್ ಪ್ರೌಢಶಾಲೆಯಲ್ಲಿ ಸ್ಪ್ಯಾನಿಷ್ ಭಾಷಾ ಶಿಕ್ಷಕಿಯಾಗಿರುವ 28 ವರ್ಷದ ಡಲ್ಸೆ ಫ್ಲೋರ್ಸ್ ಅವರನ್ನು 2023ರಲ್ಲಿ 17 ವರ್ಷದ ವಿದ್ಯಾರ್ಥಿ ಜೊತೆ ಅನುಚಿತ ಸಂಬಂಧ ಹೊಂದಿದ್ದ ಆರೋಪದ ಮೇಲೆ ಬಂಧಿಸಲಾಗಿದೆ.

28 ವರ್ಷದ ಡ್ಯೂಲ್ಸ್ ಫ್ಲೋರೆಸ್ ಅರೆಸ್ಟ್ ಆದ ಟೀಚರ್. ಟೀಚರ್ ಸುಂದರಿ ಅನ್ನೋದರಲ್ಲಿ ಎರಡು ಮಾತಿಲ್ಲ. ಆದರೆ ಆಸೆ ಆಕ್ಷಾಂಕ್ಷೆಗಳಿಗೆ ಮಿತಿ ಇರಲಿಲ್ಲ. ಪರಿಣಾಮ ವಿದ್ಯಾರ್ಥಿಗಳನ್ನೇ ಬಳಸಿಕೊಳ್ಳಲು ಮುಂದಾಗಿದ್ದಾರೆ. ಇದೀಗ ವಿದ್ಯಾರ್ಥಿ ಪೊಲೀಸರ ಅತಿಥಿಯಾಗಿದ್ದಾರೆ.

17ರ ಹರೆಯದ ವಿದ್ಯಾರ್ಥಿ ತರಗತಿಯಲ್ಲಿ ಉತ್ತಮ ಅಂಕಗಳಿಸುತ್ತಿದ್ದ. ಪಠ್ಯೇತರ ಚಟುವಟಿಕೆಯಲ್ಲೂ ಮುಂದಿದ್ದ. ಶೇಕಡಾ 100 ರಷ್ಟು ಹಾಜರಾತಿಯೊಂದಿಗೆ ಉತ್ತಮ ವಿದ್ಯಾರ್ಥಿ ಅನ್ನೋ ಬಿರುದು ಪಡೆದಿದ್ದ. ಈ ವಿದ್ಯಾರ್ಥಿಯನ್ನೇ ಡ್ಯೂಲ್ಸ್ ಬುಟ್ಟಿಗೆ ಹಾಕಿಕೊಂಡಿದ್ದಾಳೆ. ಪ್ರೀತಿಯ ಮಾತು, ಕಾಫಿ ಡೇಟ್, ಜ್ಯೂಸ್, ಐಸ್‌ಕ್ರೀಮ್, ನೋಡ್ಸ್, ಡೌಟ್ ಕ್ಲೀಯರ್ ಹೀಗೆ ಟೀಚರ್ ಒಂದಷ್ಟು ಆಸಕ್ತಿ ವಹಿಸಿ ವಿದ್ಯಾರ್ಥಿ ಜೊತೆಗೆ ಆತ್ಮಿಯವಾಗಿದ್ದಾಳೆ. ಬಳಿಕ ಫೋನ್ ಮೂಲಕ ಚಾಟಿಂಗ್ ಶುರು ಮಾಡಿದ್ದಾಳೆ. ಚಾಟಿಂಗ್ ಬೇರೆಡೆಗೆ ತಿರುಗಿದೆ. ಹದಿಹರೆಯದ ಹುಡುಗನಿಗೆ ಟೀಚರ್ ಬಿಚ್ಚಿಟ್ಟ ಕುತೂಹಲ ಪ್ರಪಂಚದಲ್ಲಿ ಎಲ್ಲೆ ಮೀರಿದ್ದಾನೆ. ಇತ್ತ ತನ್ನ ಉದ್ದೇಶ ಈಡೇರಿಸಿಕೊಳ್ಳಲು ವಿದ್ಯಾರ್ಥಿಯನ್ನು ಮೋಹದ ಬಲೆಗೆ ಬೀಳಿಸಿ ಕಾರ್ಯ ಸಾಧಿಸಿದ್ದಾಳೆ.

ಇತ್ತೀಚಿನ ವರ್ಷಗಳಲ್ಲಿ ಶಾಲೆಯಲ್ಲಿ ಬೆಳಕಿಗೆ ಬಂದ ಸಿಬ್ಬಂದಿ ಮತ್ತು ವಿದ್ಯಾರ್ಥಿಯ ನಡುವಿನ ಲೈಂಗಿಕ ದುರುಪಯೋಗದಂತ ಎರಡನೇ ಘಟನೆ ಇದಾಗಿದೆ. ಈ ಪ್ರಕರಣದಿಂದ ಇದೀಗ ರಿವರ್‌ಬ್ಯಾಂಕ್ ಹೈಸ್ಕೂಲ್‌ಗೆ ಕೆಟ್ಟ ಹೆಸರು ಬಂದಿದೆ. ಕಾರಣ ಇತ್ತೀಚಿನ ವರ್ಷಗಳಲ್ಲಿ 2ನೇ ಪ್ರಕರಣವಾಗಿದೆ. ಈ ಹಿಂದೆ ಕೂಡ ಶಿಕ್ಷಕಿಯೊಬ್ಬರು ವಿದ್ಯಾರ್ಥಿ ಜೊತ ಈ ರೀತಿ ಸಂಬಂಧ ಇಟ್ಟುಕೊಂಡಿದ್ದರು. ಇದು ಬಹಿರಂಗವಾಗಿತ್ತು. ಶಿಕ್ಷಕಿಯನ್ನು ಪೊಲೀಸರು ಬಂಧಿಸಿದ್ದರರು. ಎರಡು ಪ್ರಕರಣಗಳು ನಡೆದಿರುವ ಕಾರಣ ಇದೀಗ ಶಾಲೆಗೆ ವಿದ್ಯಾರ್ಥಿಗಳನ್ನು ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ.

You may also like