Home » Ind Vs Pak: ಟೀಮ್‌ ಇಂಡಿಯಾ ಮಾಟಮಂತ್ರದಿಂದ ಗೆದ್ದಿದ್ದಾರೆ-ಪಾಕ್‌ ಮಾಧ್ಯಮ

Ind Vs Pak: ಟೀಮ್‌ ಇಂಡಿಯಾ ಮಾಟಮಂತ್ರದಿಂದ ಗೆದ್ದಿದ್ದಾರೆ-ಪಾಕ್‌ ಮಾಧ್ಯಮ

0 comments

Ind Vs Pak: ಟೀಮ್‌ ಇಂಡಿಯಾದ ಭರ್ಜರಿ ಗೆಲುವಿನ ನಂತರ ಇದೀಗ ಪಾಕಿಸ್ತಾನದ ಮಾಧ್ಯಮವೊಂದರಲ್ಲಿ ವಿಲಕ್ಷಣ ಚರ್ಚೆ ಭಾರೀ ವೈರಲ್‌ ಆಗಿದೆ. ಪಾಕಿಸ್ತಾನ ಸೋಲಿನಿಂದ ಶುರುವಾದ ಚರ್ಚೆಯಲ್ಲಿ ಪ್ಯಾನೆಲ್‌ಗಳು ಆಘಾತಕಾರಿ ಮತ್ತು ವಿಲಕ್ಷಣ ಆರೋಪಗಳನ್ನು ಮಾಡಿದೆ. ಅದರಲ್ಲೂ ಒಬ್ಬರು ಭಾರತವು ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣಕ್ಕೆ 22 ಹಿಂದೂ ಪುರೋಹಿತರನ್ನು ಮಾಟಮಂತ್ರ ಮಾಡಲು ಕಳುಹಿಸಿದ್ದು, ಇದರಿಂದ ಪಾಕಿಸ್ತಾನ್‌ ಆಟಗಾರರ ಗಮನವನ್ನು ಬೇರೆಡೆಗೆ ಸೆಳೆಯಿತು ಎಂದು ಹೇಳಿದ್ದಾರೆ.

ಇನ್ನೋರ್ವ ಪ್ಯಾನೆಲಿಸ್ಟ್‌ ಭಾರತ ಪಾಕಿಸ್ತಾನದಲ್ಲಿ ಆಡಲು ನಿರಾಕರಣೆ ಮಾಡಲು ಇದೇ ಕಾರಣ. ಪಂದ್ಯಕ್ಕೂ ಮೊದಲು ಪೂಜೆ ಮಾಡಬೇಕಿತ್ತು. ಪಾಕಿಸ್ತಾನದಲ್ಲಿ ಅದು ಸಾಧ್ಯವಿಲ್ಲ. ಏಳು ಪುರೋಹಿತರನ್ನು ದುಬೈನಲ್ಲಿ ನಡೆದ ಪಂದ್ಯಕ್ಕೂ ಮೊದಲು ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿದ್ದಾರೆ ಎಂದು ಆರೋಪ ಮಾಡಿದ್ದಾರೆ.

You may also like