Home » Secret Codes: ಮೊಬೈಲ್ ಬಳಕೆದಾರರೇ ಗಮನಿಸಿ- ಈ 7 ಸೀಕ್ರೇಟ್ ಕೋಡ್ ಬಳಸಿ, ನಿಮ್ಮ ಫೋನಿನ ಪ್ರತಿಯೊಂದು ಮಾಹಿತಿ ಪಡೆಯಿರಿ!!

Secret Codes: ಮೊಬೈಲ್ ಬಳಕೆದಾರರೇ ಗಮನಿಸಿ- ಈ 7 ಸೀಕ್ರೇಟ್ ಕೋಡ್ ಬಳಸಿ, ನಿಮ್ಮ ಫೋನಿನ ಪ್ರತಿಯೊಂದು ಮಾಹಿತಿ ಪಡೆಯಿರಿ!!

0 comments
Secret Codes

Secret Code in Mobile: ಹೇಳಿ ಕೇಳಿ ಇದು ಡಿಜಿಟಲ್ ಯುಗ. ಇಂದಿನ ಕಾಲದಲ್ಲಿ ಮೊಬೈಲ್ ಎಂಬ ಸಾಧನದ ಬಳಕೆ ಮಾಡದವರೆ ವಿರಳ. ಮೊಬೈಲ್ ಎಂಬ ಸಾಧನದ ಹೆಚ್ಚಿನವರ ಪಾಲಿನ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರ ಕೈಯಲ್ಲಿ ಸ್ಮಾರ್ಟ್ ಫೋನ್ ಗಳು ಹರಿದಾಡಿ ಸಂಚಲನ ಮೂಡಿಸುತ್ತಿದೆ. ಆದ್ರೆ, ನಮ್ಮ ಮೊಬೈಲ್ ನಲ್ಲಿ ಕೆಲವು ಕೋಡ್ ಗಳ ಮೂಲಕ ರಹಸ್ಯ ಮಾಹಿತಿಗಳನ್ನು (Secret Code in Mobile)ನಾವು ಕ್ಷಣ ಮಾತ್ರದಲ್ಲಿ ಪಡೆಯಬಹುದು ಎಂಬ ವಿಚಾರ ಹೆಚ್ಚಿನವರಿಗೆ ತಿಳಿದಿಲ್ಲ.

ನಮ್ಮ ಫೋನ್ ಬ್ಯಾಲೆನ್ಸ್ ಪರಿಶೀಲಿಸಲು ನಾವು ಈ ಹಿಂದೆ * ಅಥವಾ # ಎಂದು ಪ್ರಾರಂಭವಾಗುವ ಕೋಡ್ ಅನ್ನು ಡಯಲ್ ಮಾಡುತ್ತಿದ್ದದ್ದು ನೆನಪಿರಬಹುದು. ಆದರೆ ನಿಮ್ಮ ಫೋನ್‌ನಲ್ಲಿರುವ ಗುಪ್ತ ಮಾಹಿತಿಯನ್ನು(?Secret Codes) ಕ್ಷಣಮಾತ್ರದಲ್ಲಿ ಹೊರತರಬಲ್ಲ ಇಂತಹ ಇನ್ನೂ ಹಲವು ಸಿಕ್ರೇಟ್‌ ಕೋಡ್‌ಗಳಿವೆ ಎಂಬ ವಿಚಾರ ಹೆಚ್ಚಿನವರಿಗೆ ತಿಳಿದಿಲ್ಲ.

ಆಂಡ್ರಾಯ್ಡ್ 2 ರೀತಿಯ ರಹಸ್ಯ ಕೋಡ್‌ಗಳನ್ನು ಒಳಗೊಂಡಿದೆ. ಈ ಸಂಕೇತಗಳು (USSD) ಮತ್ತು (MMI) ಆಗಿದ್ದು, USSD SIM ಕಾರ್ಡ್ ಬ್ಯಾಲೆನ್ಸ್ ಮತ್ತು ಸೇವೆಗಳ ಬಗ್ಗೆ ಮಾಹಿತಿಯನ್ನು ನೀಡುತ್ತದೆ. ಇದರ ಜೊತೆಗೆ MMI ಸ್ಮಾರ್ಟ್ಫೋನ್ ಸಾಫ್ಟ್ವೇರ್ ಮತ್ತು ಹಾರ್ಡ್ವೇರ್ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ.

 

#0# : ಈ ಕೋಡ್ ಸಹಾಯದಿಂದ, ನಿಮ್ಮ ಫೋನ್‌ನ ಡಿಸ್ಪ್ಲೇ, ಸ್ಪೀಕರ್, ಕ್ಯಾಮೆರಾ, ಸೆನ್ಸಾರ್ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂಬ ವಿಚಾರ ತಿಳಿಯುವುದು.

*#21# : ಈ ಕೋಡ್‌ಗಳ ಮೂಲಕ ನಿಮ್ಮ ಕರೆ, ಡೇಟಾ ಅಥವಾ ಸಂಖ್ಯೆಯನ್ನು ಬೇರೆ ಯಾವುದೇ ಸಂಖ್ಯೆಗೆ ಫಾರ್ವರ್ಡ್ ಮಾಡಲಾಗಿದೆಯೇ ಎಂಬುದನ್ನು ತಿಳಿದುಕೊಳ್ಳಬಹುದು.
*#06# : ಫೋನ್ ಕಳೆದುಹೋದಾಗ ಈ IMEI ಸಂಖ್ಯೆ ಅವಶ್ಯಕವಾಗಿದ್ದು, ಈ ಕೋಡ್‌ನ ಸಹಾಯದಿಂದ ನಿಮ್ಮ ಫೋನ್‌ನ IMEI ಸಂಖ್ಯೆಯನ್ನು ತಿಳಿಯಬಹುದು.

*#07# : ಈ ಕೋಡ್ ನಿಮ್ಮ ಫೋನ್‌ನ SAR ಮೌಲ್ಯವನ್ನು ತಿಳಿಸುತ್ತದೆ. ಇದರಿಂದ ಫೋನ್ ಹೊರಸೂಸುವ ವಿಕಿರಣದ ಬಗ್ಗೆ ಮಾಹಿತಿ ತಿಳಿಯಬಹುದು.

##34971539## : ಈ ಕೋಡ್‌ನಿಂದ ಫೋನ್ ಕ್ಯಾಮರಾ ಮಾಹಿತಿಯನ್ನು ತಿಳಿಯಲು ಸಾಧ್ಯವಾಗುತ್ತದೆ. ಈ ಕೋಡ್ ಕ್ಯಾಮೆರಾ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಇಲ್ಲವೇ ಎಂಬುದನ್ನು ತಿಳಿಸುತ್ತದೆ.

##4636## : ಈ ಕೋಡ್‌ನಿಂದ ನಿಮ್ಮ ಸ್ಮಾರ್ಟ್‌ಫೋನ್ ಬ್ಯಾಟರಿ, ಇಂಟರ್ನೆಟ್, ವೈಫೈ ಮಾಹಿತಿಯನ್ನು ನೀವು ಪರಿಶೀಲಿಸಲು ಸಾದ್ಯವಾಗುತ್ತದೆ.
2767*3855# : ನೀವು ಈ ಕೋಡ್ ಅನ್ನು ಟೈಪ್ ಮಾಡಿದರೆ ನಿಮ್ಮ ಸ್ಮಾರ್ಟ್‌ಫೋನ್ ರಿ ಸೆಟ್ ಆಗುತ್ತದೆ. ಹೀಗಾಗಿ, ಈ ಸಂಖ್ಯೆಯನ್ನು ನಮೂದಿಸುವ ಮುನ್ನ ನಿಮ್ಮ ಮೊಬೈಲ್‌ನಲ್ಲಿನ ಡೇಟಾವನ್ನು ಸೇವ್‌ ಮಾಡಿಕೊಂಡರೆ ಉತ್ತಮ.

ಇದನ್ನು ಓದಿ: Farmers: ಅನ್ನದಾತರಿಗೆ ಸಿಎಂ ಸಿದ್ದರಾಮಯ್ಯ ನೀಡಿದ್ರು ಬಿಗ್‌ ಗುಡ್‌ ನ್ಯೂಸ್‌!!!

 

You may also like

Leave a Comment