Home » ಟೆಕ್ಕಿ ಪತಿಯ ಅನೈತಿಕ ಸಂಬಂಧ | ನೊಂದ ನವವಿವಾಹಿತೆ ಆತ್ಮಹತ್ಯೆ!

ಟೆಕ್ಕಿ ಪತಿಯ ಅನೈತಿಕ ಸಂಬಂಧ | ನೊಂದ ನವವಿವಾಹಿತೆ ಆತ್ಮಹತ್ಯೆ!

0 comments

ಮದುವೆ ಅಂದರೆ ಎರಡು ಕುಟುಂಬಗಳು ಸಂಬಂಧ ಬೆಸೆಯುವುದು ಮಾತ್ರವಲ್ಲದೆ. ಗಂಡು ಹೆಣ್ಣು ಇಬ್ಬರೂ ಯಾವುದೇ ಮುಚ್ಚು ಮರೆ ಇಲ್ಲದೆ ಜೀವನ ನಡೆಸಿಕೊಂಡು ಹೋಗಬೇಕು. ಅಲ್ಲದೆ ಸಾವಿರಾರು ಕನಸು ಹೊತ್ತು ಹೆಣ್ಣು ತನ್ನ ಹೆತ್ತವರನ್ನು ಬಿಟ್ಟು ಗಂಡನ ಜೊತೆಗೆ ಹೋಗುತ್ತಾಳೆ.
ಆದರೆ ಪತಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ರಾಮಮೂರ್ತಿ ನಗರದ ರಿಚರ್ಡ್ ಗಾರ್ಡನ್ ನಲ್ಲಿ ನವೆಂಬರ್ 10ರಂದು ನಡೆದಿದೆ.

ಗಂಡನ ಅನೈತಿಕ ಸಂಬಂಧಕ್ಕೆ ಬೇಸತ್ತು 27 ವರ್ಷದ ಶ್ವೇತಾ ನೇಣಿಗೆ ಶರಣಾದ ದುರ್ದೈವಿ. ಪತಿ ಅಭಿಷೇಕ್ ವಿರುದ್ಧ ಮೃತಳ ಕುಟುಂಬಸ್ಥರು ಇದೀಗ ಆರೋಪ ಮಾಡಿದ್ದಾರೆ. ಇವರಿಬ್ಬರು ಶ್ವೇತಾ-ಅಭಿಷೇಕ್ ಜೋಡಿ11 ತಿಂಗಳ ಹಿಂದಷ್ಟೇ ವಿವಾಹವಾಗಿದ್ದರು.

ಐಬಿಎಂ ಕಂಪನಿ ಉದ್ಯೋಗಿಯಾಗಿದ್ದ ಶ್ವೇತ ಅವರು ಟಿಸಿಎಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅಭಿಷೇಕನನ್ನು ಮದುವೆಯಾಗಿದ್ದರು. ಮದುವೆಗೂ ಮುನ್ನ ಯುವತಿಯೊಬ್ಬಳೊಂದಿಗೆ ಅಭಿಷೇಕ್ ಸಂಬಂಧ ಹೊಂದಿದ್ದನಂತೆ. ಮದುವೆಯ ನಂತರ ಈ ವಿಚಾರ ಗೊತ್ತಾಗಿ ದಂಪತಿ ನಡುವೆ ಜಗಳವಾಗಿತ್ತು. ಪರಸ್ಪರ ರಾಜಿ ಪಂಚಾಯತಿ ಬಳಿಕ ಇಬ್ಬರೂ ಒಟ್ಟಿಗೆ ಜೀವನ ಸಾಗಿಸುತ್ತಿದ್ದರು.

ಆದರೆ ಈ‌ ನಡುವೆ ಅಭಿಷೇಕ್ ಪುನಃ ತನ್ನ ಹಳೇ ಚಾಳಿ‌ ಮುಂದುವರೆಸಿದ್ದನಂತೆ. ಅದರಿಂದ ಬೇಸತ್ತ ಶ್ವೇತಾ ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ರಾಮಮೂರ್ತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

You may also like

Leave a Comment