Home » Telangana: ಹೃದಯಾಘಾತಕ್ಕೆ 12 ವರ್ಷದ ಬಾಲಕಿ ಸಾವು !!

Telangana: ಹೃದಯಾಘಾತಕ್ಕೆ 12 ವರ್ಷದ ಬಾಲಕಿ ಸಾವು !!

0 comments

Telangana: ಇಂದು ವೃದ್ಧರಿಂದ ಹಿಡಿದು ಮಕ್ಕಳವರೆಗೂ ಹೃದಯಾಘಾತ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ತೆಲಂಗಾಣದಲ್ಲಿ 12 ವರ್ಷದ ಬಾಲಕಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.

ಹೌದು, ತೆಲಂಗಾಣದ(Telangana) ಚೆನ್ನೂರು ಪಟ್ಟಣದಲ್ಲಿ 12 ವರ್ಷದ ಬಾಲಕಿ ಹೃದಯಾಘಾತದಿಂದ ( Cardiac Arrest ) ಸಾವನ್ನಪ್ಪಿದ್ದಾಳೆ. ಚೆನ್ನೂರಿನ ಪದ್ಮನಗರ ಬಡಾವಣೆಯ ಶ್ರೀನಿವಾಸ್‌-ರಾಮ ದಂಪತಿ ಪುತ್ರಿ ನಿವೃತ್ತಿ ಮೊದಲ ಚೆನ್ನೂರು ಪಟ್ಟಣದ ಸ್ಥಳೀಯ ಶಾಲೆಯೊಂದರಲ್ಲಿ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದಳು. ಕಾರ್ತಿಕ ಹುಣ್ಣಿಮೆ ಇದ್ದ ಕಾರಣ ಶಾಲೆಗೆ ರಜೆ ನೀಡಲಾಗಿತ್ತು. ಹಬ್ಬದ ಚಟುವಟಿಕೆಯಲ್ಲಿ ನಿರತರಾಗಿದ್ದ ನಿವೃತ್ತಿ ದಿಢೀರ್ ಕುಸಿದು ಬಿದ್ದಳು. ಇದನ್ನು ಗಮನಿಸಿದ ಮನೆಯವರು ನಿವೃತಿ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

ವೈದ್ಯರು ನಿವೃತಿ ಅದಾಗಲೇ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ನಿವೃತಿ ಮನೆಯಲ್ಲಿ ಏಕಾಏಕಿ ಕುಸಿದು ಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿರುವುದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

You may also like

Leave a Comment