Home » ಪುರಾತನ ದೇವಾಲಯವನ್ನೇ ಅಗೆದು ಧ್ವಂಸ ಮಾಡಿದ ದುಷ್ಕರ್ಮಿಗಳು!! ನಿಧಿಯಾಸೆಗೆ ಎದೆಯೆತ್ತರದ ಗುಂಡಿ ತೋಡಿದವರಿಗೆ ಸಿಕ್ಕಿದ್ದು ಏನು!??

ಪುರಾತನ ದೇವಾಲಯವನ್ನೇ ಅಗೆದು ಧ್ವಂಸ ಮಾಡಿದ ದುಷ್ಕರ್ಮಿಗಳು!! ನಿಧಿಯಾಸೆಗೆ ಎದೆಯೆತ್ತರದ ಗುಂಡಿ ತೋಡಿದವರಿಗೆ ಸಿಕ್ಕಿದ್ದು ಏನು!??

0 comments

ದುಷ್ಕರ್ಮಿಗಳ ತಂಡವೊಂದು ನಿಧಿಯ ಆಸೆಗಾಗಿ ದೇವಾಲಯವನ್ನೇ ಪುಡಿಗೈದ ಘಟನೆಯೊಂದು ರಾಯಚೂರು ಜಿಲ್ಲೆಯಲ್ಲಿ ನಡೆದಿದ್ದು ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಜಿಲ್ಲೆಯ ದೇವದುರ್ಗ ತಾಲೂಕಿನ ಯಾಟಗಲ್ ಗ್ರಾಮದ ಕೃಷ್ಣ ದೇವಾಲಯದಲ್ಲಿ ಈ ಘಟನೆ ನಡೆದಿದ್ದು,ದೇವರ ಮೂರ್ತಿಯನ್ನು ಕಿತ್ತೆಸೆದು ಎದೆಯೆತ್ತರದ ಗುಂಡಿ ತೋಡಿ ದೇವಾಲಯವನ್ನೇ ಧ್ವಂಸಗೊಳಿಸಲಾಗಿದೆ.

ದೇಗುಲದ ಕೆಳ ಭಾಗದಲ್ಲಿ ನಿಧಿ ಇದೆ ಎಂಬ ಉಹಾಪೋಹಗಳನ್ನು ನಂಬಿ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡುಬಂದಿದ್ದು,ಸದ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಮುಂದುವರಿದಿದೆ.

You may also like

Leave a Comment