Home » Terrorist: ಪ್ರಹ್ಲಾದ ಜೋಶಿ ಅವರೇ ಭಯೋತ್ಪಾದಕರು – ಸಿಎಂ ಸಿದ್ದರಾಮಯ್ಯ

Terrorist: ಪ್ರಹ್ಲಾದ ಜೋಶಿ ಅವರೇ ಭಯೋತ್ಪಾದಕರು – ಸಿಎಂ ಸಿದ್ದರಾಮಯ್ಯ

1 comment

Terrorist: ಕಾಂಗ್ರೆಸ್ ಪಕ್ಷವನ್ನು(Congress party) ಭಯೋತ್ಪಾದಕರು ಎಂದು ಹೇಳಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ(Prahalad joshi) ಅವರೇ ಭಯೋತ್ಪಾದಕರು ಎಂದು ಹುಬ್ಬಳ್ಳಿಯಲ್ಲಿ(Hubli) ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramayiah) ತಿರುಗೇಟು ನೀಡಿದ್ದಾರೆ.

ಹಳೇಹುಬ್ಬಳ್ಳಿ ಗಲಭೆ ಪ್ರಕರಣ ಸೇರಿದಂತೆ 42 ಪ್ರಕರಣವನ್ನು ವಾಪಾಸ್ ಪಡೆದ ವಿಚಾರಕ್ಕೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯನವರು, ಬಿಜೆಪಿಯವರು ಕೇವಲ ಸುಳ್ಳು, ನಿರಾಧಾರ ವಿಚಾರಗಳ ಮೇಲೆ ಪ್ರತಿಭಟನೆ ಮಾಡುತ್ತಾರೆ. ಇದಕ್ಕಾಗಿಯೇ ಸಂಪುಟ ಖಾತೆಯ ಉಪಸಮಿತಿ ರಚನೆ ಮಾಡಲಾಗಿರುತ್ತದೆ. ಅದು ಸಲ್ಲಿಸಿದ ವರದಿ ಆಧರಿಸಿ ನಾವು 42 ಪ್ರಕರಣಗಳನ್ನು ವಾಪಾಸ್ ಪಡೆದುಕೊಂಡಿದ್ದೇವೆ ಎಂದರು.

ಈ ಎಲ್ಲ ಪ್ರಕರಣಗಳು ನಂತರ ಕೋರ್ಟ್’ಗೆ ಸಲ್ಲಿಕೆಯಾಗಲಿದ್ದು, ಅಲ್ಲಿ ಅನುಮತಿ ನೀಡದ ಮೇಲೆಯೇ ಪ್ರಕರಣಗಳನ್ನು ಮರಳಿ ಪಡೆಯಲು ಸಾಧ್ಯ. ಹಳೇಹುಬ್ಬಳ್ಳಿ ಗಲಭೆ ಪ್ರಕರಣದೊಂದಿಗೆ ಇದೇ ತರಹದ ವಿವಿಧ ಪ್ರಕರಣಗಳನ್ನು ಸಹ ಹಿಂಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.

You may also like

Leave a Comment