Home » PM Modi: ಭೂಮಿಯ ಕೊನೆಯ ಮೂಲೆಯಲ್ಲಿ ಅಡಗಿದ್ದರೂ ಭಯೋತ್ಪಾದಕರನ್ನು ಬಿಡುವುದಿಲ್ಲ; ಪ್ರಧಾನಿ ಮೋದಿ ಬಹಿರಂಗ ಎಚ್ಚರಿಕೆ

PM Modi: ಭೂಮಿಯ ಕೊನೆಯ ಮೂಲೆಯಲ್ಲಿ ಅಡಗಿದ್ದರೂ ಭಯೋತ್ಪಾದಕರನ್ನು ಬಿಡುವುದಿಲ್ಲ; ಪ್ರಧಾನಿ ಮೋದಿ ಬಹಿರಂಗ ಎಚ್ಚರಿಕೆ

0 comments
PM Modi

PM Modi: ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ಬಿಹಾರದ ಮಣ್ಣಿನಿಂದ ಪಾಕಿಸ್ತಾನದಲ್ಲಿ ಕುಳಿತಿರುವ ಉಗ್ರರಿಗೆ ನೇರ ಸಂದೇಶವನ್ನು ನೀಡಿದರು.

ಬಿಹಾರದ ನೆಲದಿಂದ, ನಾನು ಇಡೀ ಜಗತ್ತಿಗೆ ಹೇಳುತ್ತಿರುವುದು ಭಾರತವು ಪ್ರತಿಯೊಬ್ಬನು ಭಯೋತ್ಪಾದಕ ಮತ್ತು ಅವನ ಬೆಂಬಲಿಗರನ್ನು ಗುರುತಿಸಿ, ಪತ್ತೆಹಚ್ಚಿ ಶಿಕ್ಷಿಸುತ್ತದೆ. ನಾವು ಅವರನ್ನು ಭೂಮಿಯ ಯಾವುದೇ ಮೂಲೆಯಲ್ಲಿದ್ದರೂ ಬಿಟ್ಟುಕೊಡುವುದಿಲ್ಲ. ಭಯೋತ್ಪಾದನೆಯಿಂದ ಭಾರತದ ಆತ್ಮಸ್ಥೈರ್ಯ ಕುಗ್ಗೋದಿಲ್ಲ. ನ್ಯಾಯ ಸಿಗುತ್ತದೆ ಮತ್ತು ಇದಕ್ಕಾಗಿ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಲಾಗುವುದು. ಈ ವಿಷಯದಲ್ಲಿ ಇಡೀ ದೇಶ ಒಟ್ಟಾಗಿ ನಿಂತಿದೆ. ಮಾನವೀಯತೆಯಲ್ಲಿ ನಂಬಿಕೆ ಇಡುವ ಪ್ರತಿಯೊಬ್ಬ ವ್ಯಕ್ತಿಯು ನಮ್ಮೊಂದಿಗೆ ನಿಲ್ಲುತ್ತಾರೆ. ನಮ್ಮೊಂದಿಗೆ ನಿಂತಿರುವ ವಿಶ್ವದ ರಾಷ್ಟ್ರಗಳ ಜನರು ಮತ್ತು ನಾಯಕರಿಗೆ ನಾನು ಧನ್ಯವಾದ ಹೇಳುತ್ತೇನೆ.

‘ಗಾಯಗೊಂಡವರಿಗೆ ಚಿಕಿತ್ಸೆ ನೀಡಲು ಸರ್ಕಾರ ತನ್ನ ಕೈಲಾದಷ್ಟು ಪ್ರಯತ್ನಿಸುತ್ತಿದೆ’ ಎಂದು ಪ್ರಧಾನಿ ಮೋದಿ ಹೇಳಿದರು. ಇದು ಕೇವಲ ನಿರಾಯುಧ ಪ್ರವಾಸಿಗರ ಮೇಲಿನ ದಾಳಿಯಲ್ಲ, ಬದಲಾಗಿ ದೇಶದ ಆತ್ಮದ ಮೇಲಿನ ದಾಳಿಯಾಗಿದೆ. ಈ ದಾಳಿಗೆ ಕಾರಣರಾದವರಿಗೆ ಅವರ ಕಲ್ಪನೆಗೂ ಮೀರಿ ಶಿಕ್ಷೆಯಾಗುತ್ತದೆ ಎಂದು ನಾನು ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ.

You may also like