5
Meenakshi : ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ನಟಿಸುವ ಮೂಲಕ ಮೀನಾಕ್ಷಿ(Meenakshi) ಸ್ಟಾರ್ ನಾಯಕಿಯಾಗಿ ಹೊರಹೊಮ್ಮುತ್ತಿದ್ದಾರೆ. ಲಕ್ಕಿ ಬಾಸ್ಕರ್ ಚಿತ್ರದ ಮುಖಾಂತರ ಈ ನಟಿ ಸಾಕಷ್ಟು ಖ್ಯಾತಿಯನ್ನು ಗಳಿಸಿದ್ದರು. ಇದೀಗ ಸಂದರ್ಶನ ಒಂದರಲ್ಲಿ ಈ ನಟಿ ಮಾತನಾಡಿದ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಹೌದು, ಅನಿಲ್ ರವಿಪುಡಿ ನಿರ್ಮಿಸಿರುವ ಈ ಚಿತ್ರದಲ್ಲಿ ವೆಂಕಟೇಶ್ ನಾಯಕನಾಗಿ ನಟಿಸಿದ್ದರೆ, ಐಶ್ವರ್ಯಾ ರಾಜೇಶ್ ಮತ್ತು ಮೀನಾಕ್ಷಿ ಚೌಧರಿ ನಾಯಕಿಯರಾಗಿ ನಟಿಸಿದ್ದಾರೆ. ಈ ಚಿತ್ರದ ಪ್ರಚಾರದ ಒಂದು ಸಂದರ್ಶನದಲ್ಲಿ ಮೀನಾಕ್ಷಿ ಅವರು “ಒಬ್ಬ ಪುರುಷನಲ್ಲಿ ನಾನು ಬಯಸುವ ವಿಷಯಗಳು ಇವು.. ನನ್ನನ್ನು ನಾನು ಇರುವ ಹಾಗೇ ಇಷ್ಟ ಪಡುವ ವ್ಯಕ್ತಿ ಬೇಕು.. ಅಂತಹ ಗುಣಗಳನ್ನು ಹೊಂದಿರುವ ವ್ಯಕ್ತಿ ಸಿಕ್ಕರೆ, ತಕ್ಷಣ ಅವನನ್ನು ಮದುವೆಯಾಗುತ್ತೇನೆ” ಎಂದು ಹೇಳಿದ್ದಾರೆ.. ಅವರ ಈ ಹೇಳಿಕೆಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿವೆ.
