1
Bengaluru: ಬೆಂಗಳೂರಿನ (Bengaluru) ಐತಿಹಾಸಿಕ ಕರಗ ಮಹೋತ್ಸವ ಏಪ್ರಿಲ್ 14 ರವರೆಗೆ, ಅಂದರೆ ಒಟ್ಟು 11 ದಿನಗಳ ಕಾಲ ನಡೆಯಲಿದೆ. ಹೀಗಾಗಿ ದೇವಸ್ಥಾನದಲ್ಲಿ ಬಿರುಸಿನಿಂದ ತಯಾರಿಗಳು ಸಾಗಿವೆ.
ಧರ್ಮರಾಯ ಸ್ವಾಮಿ ದೇವಸ್ಥಾನದ ಕರಗ ಮಹೋತ್ಸವಕ್ಕೆ ನಿನ್ನೆ ರಾತ್ರಿ10 ಗಂಟೆಗೆ ಧ್ವಜರೋಹಣ ಮಾಡುವುದರ ಮೂಲಕ ಚಾಲನೆ ದೊರೆತಿದ್ದು, ಕರಗ ಮಹೋತ್ಸವಕ್ಕೆ ಸಕಲ ತಯಾರಿಗಳು ನಡೆದಿದ್ದು, ಈ ಬಾರಿಯೂ ಎ. ಜ್ಞಾನೇಂದ್ರ ಕರಗ ಹೊರಲಿದ್ದಾರೆ. ಇದರೊಂದಿಗೆ ಅವರು 15 ಬಾರಿ ಕರಗ ಹೊತ್ತಂತಾಗಲಿದೆ.
