6
Bangalore: ಶ್ಯಾಮರಾಜಪುರದ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ಕಳ್ಳನೋರ್ವ ಕಳ್ಳತನ ಮಾಡಿದ ಘಟನೆಗೆ ಕುರಿತಂತೆ ಯಲಹಂಕ ನ್ಯೂಟೌನ್ ಪೊಲೀಸರು ಆರೋಪಿಯನ್ನು ಬಂಧನ ಮಾಡಿದ್ದಾರೆ.
ಸಂಜಯ್ ಬಂಧಿತ ಆರೋಪಿ.
ಈತ ದೇವಸ್ಥಾನದಲ್ಲಿ ಮಾ.5 ರಂದು ದೇಗುಲದ ಬೆಳ್ಳಿ ತಟ್ಟೆ, 15 ಬೆಳ್ಳಿ ಬಟ್ಟಲು, ಬೆಳ್ಳಿ ಹಸುವಿನ ವಿಗ್ರಹ, 4 ತಾಳಿ, ಕಾಸಿನ ಸರವನ್ನು ಕದ್ದಿದ್ದ. ನಂತರ ಈತ ಪರಾರಿಯಾಗಿದ್ದ. ನಂತರ ಸಿಸಿಟಿವಿ ದೃಶ್ಯಾವಳಿ ಮೂಲಕ ಆರೋಪಿಯ ಬಂಧನ ಮಾಡಲಾಗಿದೆ.
ಆರೋಪಿ ಸಂಜಯ್ ವಿರುದ್ಧ ಈ ಹಿಂದೆ ಕೂಡಾ ಹಲವು ಪ್ರಕರಣಗಳು, ವಾರೆಂಟ್ ಜಾರಿಯಾಗಿತ್ತು. ಆದರೆ ವಕೀಲರಿಗೆ ಕೊಡಲು ಹಣವಿಲ್ಲದ ಕಾರಣ ಮತ್ತೆ ಕಳ್ಳತನಕ್ಕೆ ಇಳಿದಿದ್ದ.
