Home » Tirupati : ತಿಮ್ಮಪ್ಪನ ಭಕ್ತರಿಗೆ ಮಹತ್ವದ ಸೂಚನೆ ಹೊರಡಿಸಿದ ಆಡಳಿತ ಮಂಡಳಿ- ಇನ್ಮುಂದೆ ತಿಮ್ಮಪ್ಪನ ದರ್ಶನಕ್ಕೆ ಹೋಗುವ ಭಕ್ತರು ಇದನ್ನ ಧರಿಸದಿದ್ದರೆ ನೋ ಎಂಟ್ರಿ !!

Tirupati : ತಿಮ್ಮಪ್ಪನ ಭಕ್ತರಿಗೆ ಮಹತ್ವದ ಸೂಚನೆ ಹೊರಡಿಸಿದ ಆಡಳಿತ ಮಂಡಳಿ- ಇನ್ಮುಂದೆ ತಿಮ್ಮಪ್ಪನ ದರ್ಶನಕ್ಕೆ ಹೋಗುವ ಭಕ್ತರು ಇದನ್ನ ಧರಿಸದಿದ್ದರೆ ನೋ ಎಂಟ್ರಿ !!

0 comments

Tirupati: ತಿರುಪತಿಯಲ್ಲಿ ಭಕ್ತಾದಿಗಳ ನಡುವೆ ಕಾಳ್ತುಲಿತ ಉಂಟಾಗಿ 6 ಮಂದಿ ಭಕ್ತಾದಿಗಳು ಸ್ಥಳದಲ್ಲಿ ಮೃತಪಟ್ಟು, ಇಪ್ಪತ್ತಕ್ಕೂ ಹೆಚ್ಚು ಮಂದಿ ಭಕ್ತಾದಿಗಳು ಗಾಯಗೊಂಡಿದ್ದಾರೆ. ಹೀಗಾಗಿ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ತೊಂದರೆಯಾಗದಂತೆ, ಯಾವುದೇ ಸಾವು ನೋವುಗಳು ಉಂಟಾಗದಂತೆ ವ್ಯವಸ್ಥೆ ಮಾಡಲು ಆಡಳಿತ ಮಂಡಳಿ ಸಭೆ ಸೇರಿದೆ. ಈ ಬೆನ್ನಲ್ಲೇ ಟಿಟಿಡಿ ಅವರು ಭಕ್ತರಿಗೆ ಮತ್ತೊಂದು ಮಹತ್ವದ ಸೂಚನೆ ನೀಡಿದ್ದು ಇದನ್ನು ಧರಿಸದಿದ್ದರೆ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದು ಪ್ರಕಟಣೆ ಹೊರಡಿಸಿದೆ.

ಹೌದು, ಇದೀಗ ಚೀನಾದಲ್ಲಿ ಹೊಸ ರೀತಿಯ ವೈರಸ್ ಒಂದು ಬಂದಿರುವುದಾಗಿ ವರದಿಯಾಗಿದೆ. HMPV ಎಂದು ಕರೆಯಲ್ಪಡುವ ವೈರಸ್ ಕಾಣಿಸಿಕೊಂಡಿದೆ. ಸದ್ಯ ಭಾರತದಲ್ಲೂ ಕೂಡ ಈ ವೈರಸ್ ಕಾಣಿಸಿಕೊಂಡಿರುವುದನ್ನು ಗಮನಿಸಬಹುದು. ಹೀಗಾಗಿ ಇದರ ಮುನ್ನೆಚ್ಚರಿಕೆ ಕ್ರಮಕ್ಕಾಗಿ ಭಕ್ತಾದಿಗಳೆಲ್ಲರೂ ಕಡ್ಡಾಯವಾಗಿ ಮಾಸ್ಕ್ (Mask) ಧರಿಸುವಂತೆ ಸೂಚನೆ ನೀಡಲಾಗಿದೆ. ಅಲ್ಲದೆ ಮಾಸ್ ಧರಿಸಿದರೆ ಮಾತ್ರ ದೇವರ ದರ್ಶನಕ್ಕೆ ಅವಕಾಶ ಎಂದು ಆಡಳಿತ ಮಂಡಳಿ ತಿಳಿಸಿದೆ.

ಅಂದಹಾಗೆ ಲಕ್ಷಾಂತರ ಭಕ್ತರ (Devotees) ಆಗಮನದಿಂದ ತಿರುಮಲ ಕ್ಷೇತ್ರ ಸದಾ ಸಡಗರದಿಂದ ಕೂಡಿರುತ್ತದೆ. ಇದೀಗ ಮುಂದಿನ 10 ದಿನಗಳಕಾಲ ವೈಕುಂಠ ಏಕಾದಶಿ ಇರುವುದರಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ಈ ಸಂದರ್ಭದಲ್ಲಿ ಎಲ್ಲರೂ ದಯವಿಟ್ಟು ಈ ನಿಯಮ ಪಾಲಿಸಿ ಎಂದು TTD ತಿಳಿಸಿದೆ.

You may also like