Home » Toxic : ಇನ್‌ಸ್ಟಾಗ್ರಾಮ್ ಅಕೌಂಟ್ ಡಿಲೀಟ್ ಮಾಡಿದ ಯಶ್ ಜೊತೆ ಕಾರಿನಲ್ಲಿದ್ದ ಚೆಲುವೆ!!

Toxic : ಇನ್‌ಸ್ಟಾಗ್ರಾಮ್ ಅಕೌಂಟ್ ಡಿಲೀಟ್ ಮಾಡಿದ ಯಶ್ ಜೊತೆ ಕಾರಿನಲ್ಲಿದ್ದ ಚೆಲುವೆ!!

0 comments

Toxic : ಟಾಕ್ಸಿಕ್ ಸಿನಿಮಾದ ಟೀಸರ್ ರಿಲೀಸ್ ಆಗಿ ಇಡೀ ಭಾರತೀಯ ಚಿತ್ರರಂಗವನ್ನೇ ಅಲುಗಾಡಿಸಿ ಬಿಟ್ಟಿದೆ. ಇದೇ ಮೊದಲ ಬಾರಿಗೆ ಹಿಂದೆಂದೂ ಕಾಣಿಸದ ಲುಕ್‌ನಲ್ಲಿ ರಾಕಿಂಗ್ ಸ್ಟಾರ್ ಯಶ್ ಕಾಣಿಸಿಕೊಂಡಿದ್ದಾರೆ. ನಟ ಯಶ್‌ ಪಾತ್ರವನ್ನು ಪರಿಚಯಿಸಿರುವ 2.51 ನಿಮಿಷಗಳ ವಿಡಿಯೊ ವೀಕ್ಷಿಸಿದ ಅಭಿಮಾನಿಗಳು ದಂಗಾಗಿದ್ದಾರೆ. ವಿಡಿಯೊ ಬಿಡುಗಡೆಯಾಗುತ್ತಿದ್ದಂತೆ ಹಸಿಬಿಸಿ ದೃಶ್ಯವೊಂದು ಕಾಣಿಸಿ, ಟೀಸರ್ ರಿಲೀಸ್ ಆದ 24 ಗಂಟೆಯಲ್ಲಿ ಸುಮಾರು 5 ಕೋಟಿಗೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.ಈ ಟೀಸರ್​​ನಲ್ಲಿ ಯಶ್​​ ಕಾರೊಂದರಲ್ಲಿ ಯುವತಿಯೊಟ್ಟಿಗೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಯುವತಿಯ ಕೆಲವು ಹಾಟ್ ದೃಶ್ಯಗಳು ಟೀಸರ್​​ನಲ್ಲಿ ಇವೆ. 

ಯಶ್ ಜೊತೆಗೆ ಇರುವ ನಟಿಯ ಹೆಸರು ನಟೇಲಿ ಬರ್ನ್ ಎಂದು ಮೊದಲಿಗೆ ಎಲ್ಲರೂ ತಪ್ಪು ತಿಳಿದಿದ್ದರು. ಟೀಸರ್ ರಿಲೀಸ್ ಬೆನ್ನಲ್ಲೇ ಇಷ್ಟು ಮಾದಕವಾಗಿ ಕಾಣಿಸಿಕೊಂಡಿರುವ ಚೆಲುವೆ ಯಾರು ಎಂದು ನೆಟ್ಟಿಗರು ಹುಡುಕಾಟ ನಡೆಸಿದ್ದರು. ಮೊದಲಿಗೆ ಅದು ನಟಾಲಿಯಾ ಬರ್ನ್ ಎಂದು ಬಹುತೇಕರು ತಪ್ಪು ತಿಳಿದಿದ್ದರು. ನಟಾಲಿಯಾ ಬರ್ನ್ ಕೂಡ ‘ಟಾಕ್ಸಿಕ್’ ಚಿತ್ರದಲ್ಲಿ ನಟಿಸಿದ್ದಾರೆ. ಆದರೆ ಟೀಸರ್‌ನಲ್ಲಿ ಕಾಣಿಸಿಕೊಂಡಿರುವುದು ಆಕೆ ಅಲ್ಲ. ಈ ಬಗ್ಗೆ ಸ್ವತಃ ನಿರ್ದೇಶಕಿ ಗೀತು ಮೋಹನ್ ದಾಸ್ ಮಾಹಿತಿ ನೀಡಿದ್ದರು. ಫೋಟೊ ಸಮೇತ ಆಕೆಯ ಹೆಸರನ್ನು ಬಹಿರಂಗಪಡಿಸಿದ್ದರು. ಆಕೆಯೇ ಬೀಟ್ರಿಜ್ ಟೌಫೆನ್‌ಬಾಚ್.

ಬೀಟ್ರಿಜ್ ಟೌಫೆನ್‌ಬಾಚ್ ಎಂದು ತಿಳಿದುಕೊಳ್ಳುವ ಕುತೂಹಲ ಕೆಲವರಿಗೆ ಇತ್ತು. ಆದರೆ ಆಕೆ ತನ್ನ ಇನ್‌ಸ್ಟಾಗ್ರಾಮ್ ಅಕೌಂಟ್ ಪ್ರೈವೇಟ್ ಮಾಡಿ ಇಟ್ಟಿದ್ದರು. ಆಕೆ ಬ್ರೆಜಿಲಿಯನ್ ನಟಿ ಹಾಗೂ ಮಾಡೆಲ್ ಎನ್ನುವುದು ಮಾತ್ರ ಗೊತ್ತಾಗಿತ್ತು. ಇದೀಗ ತಮ್ಮ ಇನ್‌ಸ್ಟಾಗ್ರಾಮ್ ಅಕೌಂಟ್ ಅನ್ನು ಡಿಆಕ್ಟಿವೇಟ್ ಮಾಡಿದ್ದಾರೆ. ಟೀಸರ್ ವಿವಾದಕ್ಕೆ ಗುರಿಯಾಗಿದೆ. ಸಾಕಷ್ಟು ಜನ ಆಕೆಗೆ ಮೆಸೇಜ್ ಮಾಡಿ ಕ್ವಾಟ್ಲೆ ಕೊಟ್ಟಿದ್ದಾರೆ. ಅದೇ ಕಾರಣಕ್ಕೆ ಅಕೌಂಟ್ ಡಿಆಕ್ಟಿವೇಟ್ ಮಾಡಿರಬಹುದು ಎಂದು ಚರ್ಚೆ ಶುರುವಾಗಿದೆ. ಒಟ್ಟಾರೆ ‘ಟಾಕ್ಸಿಕ್’ ಟೀಸರ್ ನಾನಾ ಕಾರಣಗಳಿಂದ ಸುದ್ದಿ ಆಗುತ್ತಿದೆ.

You may also like