Home » Uttar pradesh: ವರನಿಗಾಗಿ ಕಾದು ಕುಳಿತ ವಧುವಿಗೆ ಫಸ್ಟ್ ನೈಟ್ ದಿನವೇ ಮೋಸ!

Uttar pradesh: ವರನಿಗಾಗಿ ಕಾದು ಕುಳಿತ ವಧುವಿಗೆ ಫಸ್ಟ್ ನೈಟ್ ದಿನವೇ ಮೋಸ!

0 comments
Marriage

Uttar pradesh: ಮದುವೆಯಾದ ಮೊದಲ ರಾತ್ರಿಯಲ್ಲಿ ವಧು ಮೋಸ ಹೋದ ಘಟನೆ ಇದೇ ಮೊದಲಲ್ಲ. ಅಂತೆಯೇ ಇದೀಗ ಮದುವೆ ದಿನ ವಧು ವಿನೊಂದಿಗೆ ಪರ ಪುರುಷ ಪಸ್ಟ್ ನೈಟ್ ಮುಗಿಸಿ ಪರಾರಿಯಾದ ಘಟನೆ ಉತ್ತರ ಪ್ರದೇಶದ (Uttar pradesh) ಬದೋಹಿಯಲ್ಲಿ ನಡೆದಿದೆ.

ಹೌದು, ವಧು ರಾತ್ರಿ ಸಮಯ ಗಂಡನಿಗಾಗಿ ಕೋಣೆಯಲ್ಲಿ ಕಾದು ಕುಳಿತಿದ್ದಳು, ಇದೇ ಚಾನ್ಸ್ ಅಂತ ಪಕ್ಕದ ಮನೆಯವನು ನೇರವಾಗಿ ಮಧುಮಂಚದ ಕೋಣೆಗೆ ನುಗ್ಗಿದ್ದಾನೆ. ಆದ್ರೆ ಕೋಣೆಯಲ್ಲಿ ಲೈಟ್ ಹಾಕಿಲ್ಲದ ಕಾರಣ, ತನ್ನನ್ನು ಮದುವೆಯಾದ ಹುಡುಗನೇ ಇರಬೇಕು ಎಂದು ಅವನೊಂದಿಗೆ ತನ್ನ ದೇಹ ಹಂಚಿಕೊಂಡಿದ್ದಾಳೆ. ಆದರೆ ಸಮಯ ಕಳೆದಂತೆ ಅವಳಿಗೆ ಸಣ್ಣಗೆ ಅನುಮಾನ ಮೂಡಲು ಶುರುವಾಗಿದೆ, ಅದು ದಟ್ಟವಾಗುವಷ್ಟರಲ್ಲಿ ಏನು ನಡೆಯಬೇಕಾಗಿತ್ತೋ ಅದೆಲ್ಲವೂ ನಡೆದು ಹೋಗಿದೆ.

ತನಗೆ ಮೋಸವಾಯ್ತು ಎಂದು ಅರಿತ ವಧು ಕೂಡಲೇ ಜೋರಾಗಿ ಚೀರಿ ಎಲ್ಲರನ್ನೂ ಕರೆದಿದ್ದಾಳೆ. ಮನೆಯಲ್ಲಿದ್ದ ಎಲ್ಲರೂ ಬಂದು ನೋಡಿದಾಗ ಹೆಣ್ಣುಮಗಳ ಪಕ್ಕ ಕಂಚು ಎಂಬಾತ ಮಲಗಿದ್ದ. ಇದು ಅವನ ಮನೆಯವರಿಗೂ ಗೊತ್ತಾಗಿ ಅವನ ಇಬ್ಬರು ಸಹೋದರರು ಬಂದು ವಾದಕ್ಕೆ ಬಿದ್ದಿದ್ದಾರೆ. ಆಗಷ್ಟೇ ಮದುವೆಯಾದ ಹುಡುಗಿಯದೇ ತಪ್ಪು ಎಂದು ವಾದಿಸಿದ್ದಾರೆ.

ವಿಷಯ ತಿಳಿದ ಮನೆಯವರು ಪೊಲೀಸರಿಗೆ ಕರೆ ಮಾಡಿದ್ದು ಸ್ಥಳಕ್ಕೆ ಪೊಲೀಸರು ಆಗಮಿಸಿದಾಗ ಮಹಿಳೆಯೊಂದಿಗೆ ಮಧುಮಂಚ ಅನುಭವಿಸಿದ ಕಂಚು ಸೇರಿ ಮೂವರು ಅಲ್ಲಿಂದ ಪರಾರಿಯಾಗಿದ್ದಾರೆ. ಇನ್ನು ಘಟನೆ ನಡೆದ ಬಳಿಕ ಸಂತ್ರಸ್ತೆ ಪೊಲೀಸ್‌ ಠಾಣೆಯ ಮೆಟ್ಟಿಲೇರಿದ್ದಾರೆ. ಆದ್ರೆ ಗೋಪಿಗಂಜ್ ಪೊಲೀಸ್‌ ಠಾಣೆಯ ಪೊಲೀಸರು ಆಕೆಯ ದೂರನ್ನು ಗಣನೆಗೆತೆಗೆದುಕೊಳ್ಳದೇ ಆಕೆಯನ್ನು ಆಚೆಹಾಕಿದ್ದಾರೆ. ಆದ್ರೆ ಹಠ ಬಿಡದ ಸಂತ್ರಸ್ತೆ ನೇರ ಕೋರ್ಟ್‌ಗೆ ಹೋಗಿ ಚೀಫ್ ಜ್ಯೂಡಿಷಿಯಲ್‌ ಮ್ಯಾಜಿಸ್ಟ್ರೇಟ್‌ಗೆ ಅರ್ಜಿ ಸಲ್ಲಿಸಿದ್ದಾಳೆ. ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಾಲಯ ಕೂಡಲೇ ಕಂಚು ಹಾಗೂ ಅವನ ಸಹೋದರರ ವಿರುದ್ಧ ಎಫ್‌ಐಆ‌ರ್ ದಾಖಲಿಸಿ ಬಂಧಿಸಲು ಪೊಲೀಸರಿಗೆ ಸೂಚನೆ ನೀಡಿದೆ.

You may also like

Leave a Comment