Mumbai: ಮಹಾರಾಷ್ಟ್ರ ಸೈಬರ್ ಸಂಸ್ಥೆ ಛತ್ರಪತಿ ಸಂಭಾಜಿ ಮಹಾರಾಜ್ ಕುರಿತ ‘ಆಕ್ಷೇಪಾರ್ಹ’ ಅಂಶಗಳನ್ನು ಓಪನ್ ಸೋರ್ಸ್ ಎನ್‌ಸೈಕ್ಲೋಪೀಡಿಯಾದಿಂದ ತೆಗೆದು ಹಾಕದಿರುವ ಕಾರಣಕ್ಕೆ ವಿಕಿಪೀಡಿಯಾದ ನಾಲ್ಕು ಸಂಪಾದಕರ ವಿರುದ್ಧ ಮೊಕದ್ದಮೆ ದಾಖಲಿಸಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಕಂಟೆಂಟ್ ತೆಗೆದು ಹಾಕುವಂತೆ ಸೂಚಿಸಿ ಕ್ಯಾಲಿಫೋರ್ನಿಯಾ ಮೂಲದ ವಿಕಿಮೀಡಿಯಾ ಫೌಂಡೇಶನ್‌ಗೆ ನೋಟಿಸ್ ನೀಡಿದ್ದಾರೆ.
ವಿಕಿಮೀಡಿಯಾ ಫೌಂಡೇಶನ್ ವಿಕಿಪೀಡಿಯಾವನ್ನು ನಡೆಸುವ ಲಾಭರಹಿತ ಸಂಸ್ಥೆಯಾಗಿದೆ.
ವಿಕಿಪೀಡಿಯಾದಲ್ಲಿ ದಾಖಲಾದ ಮಾಹಿತಿ ತಪ್ಪಾಗಿದೆ. ಅದು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ ಹದಗೆಡಲು ಕಾರಣವಾಗಬಹುದು ಎಂದು ಸೈಬರ್ ಸಂಸ್ಥೆ ನೋಟಿಸ್‌ನಲ್ಲಿ ಹೇಳಿದೆ. ಮರಾಠಾ ಸಾಮ್ರಾಜ್ಯದ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜ್‌ರ ಪುತ್ರ ಸಂಭಾಜಿ ಮಹಾರಾಜ್ ಭಾರತದಲ್ಲಿ ಅತೀವ ಗೌರವಾದರಕ್ಕೆ ಪಾತ್ರರಾಗಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾದ ಸಂಭಾಜಿ ಮಹಾರಾಜರ ಜೀವನಾಧಾರಿತ ಹಿಂದಿ ಚಲನಚಿತ್ರ ʼಛಾವಾʼ ಹಿನ್ನೆಲೆಯಲ್ಲಿ ಆಕ್ಷೇಪಣೆಗಳು ಬಂದಿತ್ತು.
