Home » Online Game : ‘ಆನ್‌ಲೈನ್‌ ಗೇಮಿಂಗ್‌’ ಕುರಿತು ಮಹತ್ವದ ನಿಯಮ ಜಾರಿಗೊಳಿಸಿದ ಕೇಂದ್ರ ಸರ್ಕಾರ!

Online Game : ‘ಆನ್‌ಲೈನ್‌ ಗೇಮಿಂಗ್‌’ ಕುರಿತು ಮಹತ್ವದ ನಿಯಮ ಜಾರಿಗೊಳಿಸಿದ ಕೇಂದ್ರ ಸರ್ಕಾರ!

1 comment
Online gaming

Online gaming : ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಫೋನ್ (smart phone)ಬಳಕೆದಾರರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಉಪಯೋಗದ ಜೊತೆಗೆ ದುರುಪಯೋಗಗಳು ನಡೆಯುತ್ತಾ ಇದೆ. ಹೌದು. ಆನ್‌ಲೈನ್‌ ಗೇಮಿಂಗ್‌ (Online gaming )ಎಂಬ ಚಟ ಯುವಜನರನ್ನು ಹೆಚ್ಚಾಗಿ ಆಕರ್ಷಿಸುತ್ತಾ ಇದ್ದು, ಇದರಿಂದಾಗಿ ಅದೆಷ್ಟೋ ಜನರ ಪ್ರಾಣಕ್ಕೆ ಹಾನಿಯಾಗಿದೆ. ಇಂತಹ ಹಲವು ಘಟನೆಗಳನ್ನು ಗಮನದಲ್ಲಿರಿಸಿಕೊಂಡು, ಕೇಂದ್ರ ಸರ್ಕಾರ ಹೊಸ ನಿಯಮವನ್ನು ಜಾರಿಗೊಳಿಸಿದೆ.

 

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಆನ್‌ಲೈನ್‌ ಗೇಮಿಂಗ್‌ ಪ್ರಿಯರಿಗೆ ಬಿಗ್‌ ಶಾಕ್‌ ನೀಡಿದೆ. ಬೆಟ್ಟಿಂಗ್‌ ಮತ್ತು ಬಾಜಿ ಕಟ್ಟುವುದಕ್ಕೆ ಅವಕಾಶ ನೀಡುವ ಗೇಮಿಂಗ್‌ ಅಪ್ಲಿಕೇಶನ್‌ಗಳನ್ನು ಬ್ಯಾನ್‌ ಮಾಡಲು ಮುಂದಾಗಿದೆ. ಅಲ್ಲದೆ ಗೇಮಿಂಗ್‌ ಅಪ್ಲಿಕೇಶನ್‌ಗಳ ಮೇಲೆ ನಿಗಾವಹಿಸಲು ಹೊಸದಾಗಿ SROs ಸಂಸ್ಥೆಯನ್ನು ಸ್ಥಾಪಿಸಲು ಮುಂದಾಗಿದೆ. ಇದರಿಂದ ಅಪ್ಲಿಕೇಶನ್‌ಗಳು ಹೇಗೆ ಕಾರ್ಯನಿರ್ವಹಿಸುತ್ತಿವೆ. ಇವುಗಳ ಬೆಟ್ಟಿಂಗ್‌, ಬಾಜಿ ಕಟ್ಟುವುದಕ್ಕೆ ಅವಕಾಶ ನೀಡುತ್ತಿವೆಯಾ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ.

 

ಇನ್ನು ಕೇಂದ್ರ ಸರ್ಕಾರದ ಐಟಿ ಸಚಿವಾಲಯವು ಐಟಿ ನಿಯಮಗಳು 2023 ಅನ್ನು ಹೊಸದಾಗಿ ಅಂಗೀಕರಿಸಿದೆ. ಇದು ಆನ್‌ಲೈನ್ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳ ನೋಂದಣಿ ಮತ್ತು ಕಂಟ್ರೋಲ್‌ಗಾಗಿ “ಮಧ್ಯವರ್ತಿಗಳು” ಎಂದು ಸೆಲ್ಫ್‌-ರೆಗ್ಯೂಲೆಟರಿ ಸಂಸ್ಥೆಯ ಸ್ಥಾಪನೆಯನ್ನು ಕಡ್ಡಾಯಗೊಳಸಿದೆ. ಇದರಿಂದ ಆನ್‌ಲೈನ್‌ ಗೇಮಿಂಗ್‌ ಹೆಸರಿನಲ್ಲಿ ಜನರನ್ನು ದಾರಿ ತಪ್ಪಿಸುವ ಅಪ್ಲಿಕೇಶನ್‌ಗಳಿಗೆ ಬ್ಯಾನ್‌ ಬಿಸಿ ತಟ್ಟಿದೆ.

 

ಆನ್‌ಲೈನ್‌ ಗೇಮ್‌ಗಳಿಗೆ ಅವಕಾಶ ನೀಡುವಾಗ ಎಸ್‌ಆರ್‌ಒಗಳ ಸಲಹೆಯನ್ನು ಪಡೆಯಲಾಗುತ್ತದೆ. ಇನ್ನು ಎಸ್‌ಆರ್‌ಒ ಗಳಲ್ಲಿ ಸರ್ಕಾರವು ಉದ್ಯಮದ ಪ್ರತಿನಿಧಿಗಳು, ಶಿಕ್ಷಣ ತಜ್ಞರು ಮತ್ತು ಮಕ್ಕಳ ತಜ್ಞರು, ಮನೋವಿಜ್ಞಾನ ತಜ್ಞರು ಮುಂತಾದ ಇತರ ತಜ್ಞರನ್ನು ನೇಮಿಸಲಿದೆ. ಸರ್ಕಾರವು ಮೊದಲಿಗೆ ಮೂರು SRO ಗಳಿಗೆ ಸೂಚನೆ ನೀಡುತ್ತದೆ. ನಂತರ ಆ ಗೇಮ್‌ಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡ ನಂತರ ಅನುಮತಿ ನೀಡುವುದರ ಬಗ್ಗೆ ಯೋಚಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಈ ಮೂಲಕ ಆನ್‌ಲೈನ್‌ ಗೇಮಿಂಗ್‌ ಮೂಲಕ ಬೆಟ್ಟಿಂಗ್‌ನಂತಹ ದಂದೆಗೆ ಪ್ರೇರಣೆ ನೀಡುತ್ತಿದ್ದ ಅಪ್ಲಿಕೇಶನ್‌ಗಳು ಬ್ಯಾನ್ ಆಗಲಿದೆ.

You may also like

Leave a Comment