Home » Central Government : ವಿದ್ಯಾರ್ಥಿಗಳಿಗೆ ಶಾಕ್ ಕೊಟ್ಟ ಕೇಂದ್ರ ಸರ್ಕಾರ – ಇರೋದಿಲ್ಲ ಇನ್ನೂ ಕಡ್ಡಾಯ ಪಾಸ್, ಫೇಲ್ ಆದ್ರೆ ಫೇಲ್ !!

Central Government : ವಿದ್ಯಾರ್ಥಿಗಳಿಗೆ ಶಾಕ್ ಕೊಟ್ಟ ಕೇಂದ್ರ ಸರ್ಕಾರ – ಇರೋದಿಲ್ಲ ಇನ್ನೂ ಕಡ್ಡಾಯ ಪಾಸ್, ಫೇಲ್ ಆದ್ರೆ ಫೇಲ್ !!

0 comments

Central Government : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವೂ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಶಾಕಿಂಗ್​ ನ್ಯೂಸ್​ ಕೊಟ್ಟಿದೆ. ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, 5 ಮತ್ತು 8ನೇ ತರಗತಿಯಲ್ಲಿ ಫೇಲಾದ ವಿದ್ಯಾರ್ಥಿಗಳನ್ನು ಕಡ್ಡಾಯವಾಗಿ ಪಾಸ್ ಮಾಡುತ್ತಿದ್ದ ಸಂಪ್ರದಾಯಕ್ಕೆ ತಿಲಾಂಜಲಿ ಹಾಡಿದೆ. ಹೀಗಾಗಿ ವಿದ್ಯಾರ್ಥಿಗಳು ಫೇಲ್​ ಆದಲ್ಲಿ ಮತ್ತೆ ಓದಬೇಕಾಗುತ್ತದೆ.

ಹೌದು, ಹಾಗೂ 8ನೇ ತರಗತಿಗಳನ್ನು ಅನುತೀರ್ಣಗೊಳಿಸುವಂತಿಲ್ಲ, ಕಡ್ಡಾಯವಾಗಿ ಪಾಸ್​ ಮಾಡಬೇಕು ಎಂಬ ನಿಯಮವನ್ನು ಕೇಂದ್ರ ಸರ್ಕಾರ ತೆಗೆದು ಹಾಕಿದೆ. ಇನ್ಮುಂದೆ ಕಡ್ಡಾಯ ಪಾಸ್​ ಇರುವುದಿಲ್ಲ ಎಂದು ಹೇಳಿದೆ. ಈ ಮೂಲಕ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಮಕ್ಕಳ ಹಕ್ಕು (RTE) ಕಾಯ್ದೆ ನಿಯಮಗಳು 2010ಕ್ಕೆ ಕೇಂದ್ರ ಸರ್ಕಾರ ತಿದ್ದುಪಡಿ ತಂದಿದೆ.

ಕೇಂದ್ರ ಸರ್ಕಾರದ ಹೊಸ ರೂಲ್ಸ್​ ಪ್ರಕಾರ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ನಡೆಸುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ನೀಡಲಾಗಿದೆ. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಫೇಲ್‌ ಆದರೆ ಅದೇ ಕ್ಲಾಸ್​ನಲ್ಲೇ ಮತ್ತೆ ಓದಬೇಕು. ವಿದ್ಯಾರ್ಥಿಗಳು ಫೇಲ್​​ ಆದ 2 ತಿಂಗಳಲ್ಲಿ ರೀ-ಎಕ್ಸಾಮ್​ ಮಾಡಲಾಗುತ್ತದೆ. ಮತ್ತೊಮ್ಮೆ ಪರೀಕ್ಷೆ ಬರೆದು ಪಾಸ್​ ಮಾಡಬಹುದು. ಇಲ್ಲದೆ ಹೋದಲ್ಲಿ ಅದೇ ತರಗತಿಯಲ್ಲೇ ಮುಂದುವರಿಯಬೇಕು ಎಂದು ಶಿಕ್ಷಣ ಸಚಿವಾಲಯ ಪ್ರಕಟಿಸಿದ ಅಧಿಸೂಚನೆಯಲ್ಲಿ ತಿಳಿಸಿದೆ. ಕೇಂದ್ರ ಸರ್ಕಾರದ ಹೊಸ ನಿಯಮ ಕೇಂದ್ರೀಯ ವಿದ್ಯಾಲಯ, ನವೋದಯ ವಿದ್ಯಾಲಯ ಮತ್ತು ಸೈನಿಕ ಶಾಲೆಗಳಿಗೆ ಸೇರಿ 3,000ಕ್ಕೂ ಹೆಚ್ಚು ಶಾಲೆಗಳಿಗೆ ಅನ್ವಯ ಆಗಲಿದೆ.

You may also like

Leave a Comment